ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ
ಬೆಂಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ
ಪ್ರಕಟವಾಗಿದ್ದು ಈ ಬಾರಿಯೂ ಬಾಲಕಿಯರು ಮೇಲುಗೈ
ಸಾಧಿಸಿದ್ದಾರೆ. ಒಟ್ಟು ಶೇ. 85.63 ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ಪತ್ರಿಕಾಗೋಷ್ಠಿಯ ಮೂಲಕ ಫಲಿತಾಂಶ ಪ್ರಕಟಿಸಿದ ಶಿಕ್ಷಣ
ಸಚಿವ ಬಿ.ಸಿ. ನಾಗೇಶ್, 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ ಶೇ. 90.29 ಬಾಲಕಿಯರು ಹಾಗೂ ಶೇ. 81.30 ಬಾಲಕರು ಉತ್ತೀರ್ಣರಾಗಿದ್ದಾರೆ. ಒಟ್ಟು 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.
ಈ ಬಾರಿ ಜಿಲ್ಲೆಗಳ ನಡುವೆ ಪ್ರಥಮ ದ್ವಿತೀಯ ಎಂಬ
ಪೈಪೋಟಿಗೆ ಅವಕಾಶ ಇಲ್ಲ. ಆದ್ದರಿಂದ ಗ್ರೇಡ್ ವ್ಯವಸ್ಥೆ
ಮಾಡಲಾಗಿದೆ. 145 ಮಂದಿ ವಿದ್ಯಾರ್ಥಿಗಳಿಗೆ 625 ರಲ್ಲಿ
625 ಅಂಕ ಲಭಿಸಿದೆ. 309 ವಿದ್ಯಾರ್ಥಿಗಳಿಗೆ 625ರಲ್ಲಿ 624 ಅಂಕ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.
ಒತ್ತಡದಲ್ಲಿರುವವರಿಗೆ ಸಹಾಯವಾಣಿ: ಎಸ್ ಎಸ್ ಎಲ್ ಸಿ ಫಲಿತಾಂಶ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ
ತೆರೆದಿದೆ. ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಈ ಮೂಲಕ ಟೆಲಿ ಕೌನ್ಸಿಲಿಂಗ್ ಒದಗಿಸಲಾಗುತ್ತದೆ.
ಒತ್ತಡದಲ್ಲಿರುವ ವಿದ್ಯಾರ್ಥಿಗಳು 080 46110007 ಸಂಖ್ಯೆಗೆ ಕರೆ ಮಾಡಿ.
ಪೂರಕ ಪರೀಕ್ಷೆಗೆ ದಿನಾಂಕ ನಿಗದಿ:
ಜೂನ್ 27 ರಿಂದ ಜುಲಾಯಿ 4ರ ವರೆಗೆ ಪೂರಕ ಪರೀಕ್ಷೆ
ನಡೆಯಲಿದೆ.
ಫಲಿತಾಂಶಕ್ಕಾಗಿ- https://karresults.nic.in
,https://kseeb.kar.nic.in
,https://sslc.karnataka.gov.in