ಕರಾವಳಿ
ಮಣಿಪಾಲ : ದೈವಸ್ಥಾನದಲ್ಲಿ ಕಳವು ಪ್ರಕರಣ ಆರೋಪಿ ಬಂಧನ

ಮಣಿಪಾಲ: ಹಿರೇಬೆಟ್ಟು ದೈವಸ್ಥಾನ ಕಳವು ಪ್ರಕರಣಕ್ಕೆ
ಸಂಬಂಧಿಸಿ ಆರೋಪಿಯನ್ನು ಮಣಿಪಾಲ ಪೊಲೀಸರು ಮೇ 19ರಂದು ಬಂಧಿಸಿದ್ದಾರೆ.
ಹಿರೇಬೆಟ್ಟುವಿನ ಭಾಸ್ಕರ್ ಶೆಟ್ಟಿ (49) ಬಂಧಿತ ಆರೋಪಿ, 10 ದಿನಗಳ ಹಿಂದೆ ಹಿರೇಬೆಟ್ಟುವಿನ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ, ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಾಗ್ರಿ, ಗಂಟೆ ಸೇರಿದಂತೆ ಸುಮಾರು 50 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿತ್ತು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ
ವಿಧಿಸಲಾಗಿದೆ.