ಕರಾವಳಿ
ಮಂಗಳೂರು: ಅಕ್ರಮ ಮಾದಕ ವಸ್ತು ಹೊಂದಿದ್ದ ಮೂವರು ಆರೋಪಿಗಳ ಬಂಧನ..!

ಮಂಗಳೂರು: ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಕೇರಳದ ಗಡಿ ಭಾಗದ ಮೂಲಕ ಮಂಗಳೂರು ನಗರದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಮೇಲಂಗಡಿಯ ಅಬ್ದುಲ್ ರಹ್ಮಾನ್ ಅರ್ಫಾನ್ ಯಾನೆ ಜಲ್ದಿ ಅರ್ಫಾನ್ (24), ಬೋಳೂರು ಬೊಕ್ಕಪಟ್ಣದ ಅಬ್ದುಲ್ ಜಲೀಲ್ (42), ಬೋಳಿಯಾರ್ ಕಾಪಿಕಾಡ್‌ನ ಮುಹಮ್ಮದ್ ಮನ್ಸೂರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 32 ಗ್ರಾಂ ತೂಕದ 1,62,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುಗಳು, 4 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ, 22,000 ರೂ. ನಗದು ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇದೀಗ ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ 7,17,000 ರೂ. ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.