ಕರಾವಳಿ

ಮಣಿಪಾಲ‌ : ಕ್ರೇನ್ ಡಿಕ್ಕಿ ಆಗಿ ವ್ಯಕ್ತಿ ಮೃತ್ಯು

ಮಣಿಪಾಲ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಕ್ರೇನ್ ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಮಣಿಪಾಲದಲ್ಲಿ ಶನಿವಾರ ನಡೆದಿದೆ.

ಮೃತ ದುರ್ಧೈವಿಯನ್ನು ನಾತು ಶೇರಿಗಾರ್ ಎಂದು ಗುರುತಿಸಲಾಗಿದೆ. ನಾತು ಅವರು ಕರ್ವಾಲು-ಅಲೆವೂರು ರಸ್ತೆ ಮೂಡುಅಲೆವೂರು ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದರು.

ಈ ಸಂದರ್ಭ ಕ್ರೇನ್ ಢಿಕ್ಕಿ ಹೊಡೆದಿದೆ. ಪರಿಣಾಮ ಅವರ ತಲೆಯ ಬಲಭಾಗ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ತತ್‍ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ಸಂದರ್ಭಗಾಗಲೇ ಅವರು ಮೃತಪಟ್ಟರು. ಇದೀಗ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!