ಅಂಗವಿಕಲರಿಗೆ ಮೋಟೋರೈಸ್ಡ್ ಟ್ರೈಸಿಕಲ್ ಹಾಗೂ ಇತರ ಸಲಕರಣೆ ವಿತರಣೆ.!

ಶೇಕಡಾ75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಮೋಟೋರೈಸ್ಡ್ ಟ್ರೈಸಿಕಲ್, ಲ್ಯಾಪ್ಟಾಪ್, ಹೊಲಿಗೆ ಯಂತ್ರ, ಬ್ರೈಲ್ ಕಿಟ್ ಗಳನ್ನು ಇಂದು ದಿನಾಂಕ 23-08-2021 ರಂದು ಶಾಸಕ ಶ್ರೀ ಕೆ.ರಘುಪತಿ ಭಟ್ ಅವರು ವಿತರಿಸಿದರು.
ರಾಜ್ಯ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೋಟೋರೈಸ್ಡ್ ಟ್ರೈಸಿಕಲ್ ಮಂಜೂರು ಮಾಡಲಾಗಿದ್ದು, ಬೈಲೂರು ಆಶಾ ನಿಲಯದಲ್ಲಿ 20 ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿಗಳಾದ ಶ್ರೀನಿವಾಸ್ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಆರ್. ಶೇಷಪ್ಪ, ಉಡುಪಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ರತ್ನ ಸುವರ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.