ರಾಜ್ಯ
ಕಾಸರಗೋಡು : ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪರಾರಿ : ಮೂವರು ಪೊಲೀಸರು ಅಮಾನತು

ಕಾಸರಗೋಡು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ನಿನ್ನೆ ಬೆಳಿಗ್ಗೆ ವಿದ್ಯಾನಗರ ಬಿ.ಸಿ.ರೋಡ್‍ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕಣ್ಣೂರು ಸಶಸ್ತ್ರ ಮೀಸಲು ಪಡೆಯ ಎ ಎಸ್ ಐ ಸಜೀವನ್, ಜಶೀರ್ ಮತ್ತು ಅರುಣ್‍ರನ್ನು ಅಮಾನತುಗೊಳಿಸಿ ಡಿ ಐ ಜಿ ರಾಹುಲ್ ಆರ್ ನಾಯರ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದ ಆಲಂಪಾಡಿಯ ಅಮೀರಾಲಿ ಎಂಬ ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದಾಗ ಪೊಲೀಸರ ಗಮನ ಬೇರೆಡೆ ಸೆಳೆದು ಪರಾರಿಯಾಗಿದ್ದಾನೆ. ಈತನಿಗೆ ಶೋಧ ಮುಂದುವರಿಯುತ್ತಿದ್ದು, ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಎಂದು ತಿಳಿಸಿದ್ದಾರೆ