ಕರಾವಳಿ
ಕಾರ್ಕಳ : ಸೇತುವೆ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ

ಕಾರ್ಕಳ : ಕಾರ್ಕಳ ಕಸಬಾ ಗ್ರಾಮದ ಪೆರ್ವಾಜೆಯಲ್ಲಿ
ಮನೆಯೊಂದರ ಎದುರು ಇರುವ ತೋಡಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಅಬ್ದುಲ್ ಖಾದರ್ ಅವರು ನಿನ್ನೆ ಸಂಜೆ ವೇಳೆ ಎಂದಿನಂತೆ ಮನೆಯಿಂದ ಕಾರ್ಕಳದ ಪೇಟೆಗೆ
ನಡೆದುಕೊಂಡು ಹೋಗುತ್ತಿರುವಾಗ ಮನೆಯ ಎದುರುಗಡೆ ಇವರುವ ತೋಡಿನಲ್ಲಿ ಒಂದು ನವಜಾತ ಶಿಶುವಿನ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಅದರಂತೆ ಯಾರೋ ಅಪಚಿತರು ಮಗು ಹುಟ್ಟಬಾರದೆಂಬ ಉದ್ದೇಶದಿಂದಲೋ ಅಥವಾ ಮಗು ಹುಟ್ಟಿದ ಬಳಿಕ ಸಾಯಿಸುವ ಉದ್ದೇಶದಿಂದಲೋ ಅಥವಾ ಹುಟ್ಟಿದ ಮಗುವಿನ ಜನನದ ರಹಸ್ಯವನ್ನು ಬಚ್ಚಿಡುವ ಉದ್ದೇಶದಿಂದ ತೋಡಿಗೆ ಎಸೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.