ಅಂತಾರಾಷ್ಟ್ರೀಯ

ಶಾಲೆಗೆ ನುಗ್ಗಿ ಗುಂಡಿನ ದಾಳಿ 18 ಶಾಲಾ ಮಕ್ಕಳು ಸೇರಿದಂತೆ 21 ಮಂದಿಯ ಹತ್ಯೆ

ವಾಷಿಂಗ್ಟನ್ : ಹದಿಹರೆಯದ ಬಂದೂಕುಧಾರಿಯೊಬ್ಬ
ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿ ಗುಂಡಿನ ದಾಳಿ
ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 18 ಮಕ್ಕಳೂ ಸೇರಿದಂತೆ
21 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಅಮೆರಿಕಾದ
ಟೆಕ್ಸಾಸ್ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ
ಅಮೆರಿಕ ಅಧ್ಯಕ್ಷ ಜೋ ಬ್ರೆಡೆನ್ ತೀವ್ರ ಸಂತಾಪ
ಸೂಚಿಸಿದ್ದಾರೆ.

ದಾಳಿ ನಡೆಸಿದ ವ್ಯಕ್ತಿ 18ರ ಹರೆಯದ ಸಾಲ್ವಡೋರ್
ರಾಮೋಸ್ ಎಂದು ಗುರುತಿಸಲಾಗಿದ್ದು, ತಕ್ಷಣವೇ
ಈತನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ
ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬ್ರೆಡೆನ್ ಘಟನೆಗೆ ತೀವ್ರ ಸಂತಾಪ
ಸೂಚಿಸಿದ್ದು, ‘ಇಂತಹ ಪ್ರಕರಣಗಳು ವಿಶ್ವದ ಇತರ
ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತದೆ ಆದರೆ ಅಮೆರಿಕದಲ್ಲಿ ಪದೇಪದೇ ಆಗುತ್ತಿರುವುದು ವಿಷಾದದ ಸಂಗತಿ, ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ.ಮತ್ತು ಮೃತರ ಗೌರವಾರ್ಥ ದೇಶವ್ಯಾಪಿ ಬಾವುಟಗಳನ್ನು ಅರ್ಧಕ್ಕೆ ಹಾರಿಸಲು ಸೂಚಿಸಿದರು.

ಇತ್ತೀಚೆಗೆ, ಬಂದೂಕುಧಾರಿಯೊಬ್ಬ ನ್ಯೂಯಾರ್ಕ್ ನ
ಬಫಲೊ ನಗರದ ಸೂಪರ್ ಮಾರ್ಕೆಟ್ ನಲ್ಲಿ ಗುಂಡು
ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು.
ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದ್ದು
ವಿಷಾದದ ಸಂಗತಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!