ರಾಜ್ಯ
ಟೈಯರ್ ಸ್ಪೋಟಗೊಂಡು ಕಂಟೇನರ್ ಪಲ್ಟಿ

ಬೆಂಗಳೂರು: ಚಲಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು
ಕ್ಯಾಂಟರ್ ಲಾರಿಯೊಂದು ಪಲ್ಟಿಯಾದ ಘಟನೆ
ನೆಲಮಂಗಲ ತಾಲೂಕಿನ ದೊಡೇರಿ ಬಳಿ ಇಂದು ಬೆಳಿಗ್ಗೆ
ನಡೆದಿದೆ. ಅದೃಷ್ಟವಶಾತ್ ಚಾಲಕ ಸೇರಿ ಇಬ್ಬರು
ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡಿತರ ಆಹಾರ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್
ಲಾರಿ ದೊಡೇರಿ ಬಳಿ ಪಲ್ಟಿಯಾಗಿ ರಾಷ್ಟ್ರೀಯ ಹೆದ್ದಾರಿ
48 ರಲ್ಲಿ ಸುಮಾರು 2 ಕಿಲೋ ಮೀಟರ್ ರಸ್ತೆ ಟ್ರಾಫಿಕ್
ಜಾಂ ಆಗಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.
ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ನೆಲಮಂಗಲ
ಸಂಚಾರಿ ಪೊಲೀಸರು ಲಾರಿಯನ್ನು ತೆರವುಗೊಳಿಸಿ
ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.