ಕರಾವಳಿ
ಉಡುಪಿ: ಕರಾವಳಿ ಬೈಪಾಸ್ ಬಳಿ ಸರಣಿ ಅಪಘಾತ

ಉಡುಪಿ: ಟೈಲ್ಸ್ ಸಾಗಿಸುತ್ತಿದ್ದ ಲಾರಿಯೊಂದು ಏಕಾಏಕಿ ನಿಧನಗೊಳಿಸಿದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಉಡುಪಿಯ ಕರಾವಳಿ ಬೈಪಾಸ್ ಬಳಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
ಕುಂದಾಪುರ ಕಡೆಗೆ ಹೋಗುತ್ತಿದ್ದ ಟೈಲ್ಸ್ ಸಾಗಿಸುತ್ತಿದ್ದ ಲಾರಿಯು ಯಾವುದೇ ಮುನ್ಸೂಚನೆ ನೀಡದೆ ಅದರ ಚಾಲಕ ಏಕಾಏಕಿ ನಿಧನಗೊಳಿಸಿದ್ದಾನೆ.
ಈ ವೇಳೆ ವೇಗವಾಗಿ ಹಿಂದಿನಿಂದ ಬರುತ್ತಿದ್ದ ಕಾರು ಲಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಇದೇ ಸಂದರ್ಭ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೊಂದು ಕಾರು ಮೊದಲ ಕಾರಿಗೆ ಢಿಕ್ಕಿಯಾಗಿದೆ.
ಉಡುಪಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿದರು. ಕಾರು ಚಾಲಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.