ಕರಾವಳಿ
ಉಡುಪಿ ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ
ಜಾರಿಬೀಳುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ರೈಲ್ವೇ ರಕ್ಷಣಾ ದಳದ ಸಿಬಂದಿ ರಕ್ಷಿಸಿದ ಘಟನೆ ಇಂದ್ರಾಳಿ ರೈಲ್ವೇ
ನಿಲ್ದಾಣದಲ್ಲಿ ಬುಧವಾರ ಸಾಯಂಕಾಲ ನಡೆದಿದೆ.
ಪೆರ್ಡೂರು ನಿವಾಸಿ ಕುಟ್ಟಿ ಕುಂದರ್ (70) ಅವರು
ಮುಂಬಯಿಗೆ ತೆರಳುತ್ತಿದ್ದ ಮಗಳ ಬ್ಯಾಗ್‌ಗಳನ್ನು
ರೈಲಿನಲ್ಲಿರಿಸಿ ಇಳಿಯುತ್ತಿದ್ದಾಗ ರೈಲು ಸಂಚರಿಸಲು
ಆರಂಭಿಸಿದ್ದು, ಅವರು ಆಯತಪ್ಪಿ ಬಿದ್ದರು. ರೈಲಿನ
ಹಿಡಿಕೆಯನ್ನು ಹಿಡಿದುಕೊಂಡಿದ್ದ ಕಾರಣ ಸುಮಾರು 30
ಮೀಟರ್ ದೂರದ ವರೆಗೆ ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ಗಮನಿಸಿದ ಕರ್ತವ್ಯನಿರತ ಸಿಬಂದಿ ಎಂ.ವಿ. ಸಜೀರ್ ಅವರು ಧಾವಿಸಿ ಬಂದ ಕುಂದರ್ ಅವರನ್ನು ಹಿಡಿದು ಮೇಲಕ್ಕೆತ್ತಿ ಉಪಚರಿಸಿದರು.
ಕುಂದರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.