ಡಾ. ಎಂ.ಎನ್ ರಾಜೇಂದ್ರ ಕುಮಾರ್ ಗೆ ‘ಮೋಸ್ಟ್ ಇನ್ನೋವೇಟಿವ್ ಬ್ಯುಸಿನೆಸ್ ಲೀಡರ್ಸ್ ಅವಾರ್ಡ್

ಮಂಗಳೂರು: ಗ್ಲೋಬಲ್ ಲೀಡರ್ಸ್ ಫೌಂಡೇಶನ್ (ಜಿಎಲ್ ಎಫ್) ನವದೆಹಲಿ ಅತ್ಯುತ್ತಮ ಸಾಂಸ್ಥಿಕ ನಾಯಕತ್ವದ ಆಧಾರದಲ್ಲಿ ನೀಡುವ ಮೋಸ್ಟ್ ಇನ್ನೋವೇಟಿವ್ ಬ್ಯುಸಿನೆಸ್ ಲೀಡರ್ಸ್ ಅವಾರ್ಡ್ – 2022 ವೈಯುಕ್ತಿಕ ಪ್ರಶಸ್ತಿಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿ ಡಿಸಿಸಿ ಬ್ಯಾಂಕ್) ಅಧ್ಯಕ್ಷರಾದ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಲಭಿಸಿದೆ.
ಭಾರತದಲ್ಲಿನ ಕಾರ್ಪೊರೇಟ್ ನಾಯಕತ್ವ
ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಹೊಸ ಅಭಿವೃದ್ಧಿ, ಕಾರ್ಯಕ್ಷಮತೆ ಹಾಗೂ ಅದ್ಭುತ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನೀಡುತ್ತಿದೆ.
ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಜನಸ್ನೇಹಿ ಸೇವೆಗಳಿಂದ ರಾಜ್ಯ ಮಟ್ಟದಲ್ಲಿ
ಗುರುತಿಸಿಕೊಂಡಿದೆ. ಭಾರತ ಸರಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ
ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮುಂಚೂಣಿಯಲ್ಲಿದೆ.
ಯೋಜನೆಯಲ್ಲಿ ದಾಖಲೆಯ ಪ್ರಮಾಣದ ಚಂದಾದಾರರನ್ನು ನೊಂದಾಯಿಸಿದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ವರದಿ ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಪ್ರಶಸ್ತಿಗೆ ಪಾತ್ರವಾಗಿದೆ.
ಡಾ .ರಾಜೇಂದ್ರ ಕುಮಾರ್ ಹಲವಾರು ರಾಷ್ಟ್ರೀಯ,
ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ರಾಜೇಂದ್ರ ಕುಮಾರ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ
ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವಾರ್ಡ್ ಗೆ
ಆಯ್ಕೆ ಮಾಡಿದೆ. ಗೋವಾದಲ್ಲಿ ನಡೆಯುವ ಗ್ಲೋಬಲ್
ಲೀಡರ್ ಶಿಪ್ ಶೃಂಗಸಭೆಯಲ್ಲಿ ರಾಜೇಂದ್ರ ಕುಮಾರ್
ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.