ಕರಾವಳಿ

ಹೆಲ್ಪಿಂಗ್ ಹ್ಯಾಂಡ್ ಕುಂದಾಪುರ ನೊಂದ ಹೃದಯಗಳಿಗೆ ನೆರವಿನ ಹಸ್ತ 12ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

ದಿನಾಂಕ 29-05-2022 ಕುಂದಾಪುರ ತಾಲ್ಲೂಕು ಬೀಜಾಡಿ ಗ್ರಾಮದ ಬಡ ಪುಟಾಣಿ  ವಿನಾಯಕ  ಹೃದಯ ಸಂಭಂಧಿ ಕಾಯಿಲೆಯಿಂದ ಬಳಲುತ್ತಿದ್ದು ಈ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ‌ ವೆಚ್ಚ ವಾಗಿದ್ದು, ಈ‌ಗಾಗಲೇ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಮ್ಮ  ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ  ಸಂಸ್ಥೆಯು ನಮ್ಮ 12ನೇಯ ಸೇವಾ ಯೋಜನೆಯ ಮುಖಾಂತರ ಸಹೃದಯಿ ದಾನಿಗಳ ನೆರವಿನಿಂದ ಒಟ್ಟು 17000 ರೂಪಾಯಿ ಹಣವನ್ನು ಕೋಟೆಶ್ವರ  ಶ್ರೀ ಕೋಟಿಲಿಂಗೆಶ್ವರ  ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅರ್ಚಕರ ಮೂಲಕ ಹಣವನ್ನು ಮಗುವಿನ ತಾಯಿಯ ಕೈಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ  ಪ್ರದೀಪ್ ಮೊಗವೀರ ಕೋಟೆಶ್ವರ , ಕಾರ್ಯದರ್ಶಿಗಳಾದ  ಗುರುಚರಣ್ ಖಾರ್ವಿ ಕುಂದಾಪುರ  , ಹಾಗೂ ಸಂಸ್ಥೆಯ ಗೌರವ ಸದಸ್ಯರಾದ ಮಂಜುನಾಥ್ ಮೊಗವೀರ, ಸಂದೀಪ್ ಮೊಗವೀರ, ಶರತ್ ಮೊಗವೀರ,ಗಣೇಶ್ ಕಾಮತ್,ಚಂದ್ರ ಮೊಗವೀರ ಇವರು ಉಪಸ್ಥಿತರಿದ್ದರು. ಪುಟ್ಟ ಬಾಲಕ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವೆಲ್ಲಾ ಪ್ರಾರ್ಥಿಸೊಣ.

ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ
(ನೊಂದ ಹೃದಯಗಳಿಗೆ ನೆರವಿನ ಹಸ್ತ)
9535309691

Related Articles

Leave a Reply

Your email address will not be published. Required fields are marked *

Back to top button
error: Content is protected !!