ಅಂತಾರಾಷ್ಟ್ರೀಯ

ಫ್ರಾನ್ಸ್: 14ನೇ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

ಯುರೋಪಿಯನ್ ಚಾಂಪಿಯನ್ಸ್ ಲೀಗ್ (ಯುಸಿಎಲ್) ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಿವರ್‌ಪೂಲ್ ತಂಡ ಮಣಿಸಿದ ರಿಯಲ್ ಮ್ಯಾಡ್ರಿಡ್, 67ನೇ ಆವೃತ್ತಿಯಲ್ಲಿ
ದಾಖಲೆಯ 14ನೇ ಬಾರಿಗೆ ಪ್ರತಿಷ್ಠಿತ ಯುಸಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ದಿ ಫ್ರಾನ್ಸ್ ಸ್ಟೇಡಿಯಂನಲ್ಲಿ ಪ್ರತಿಷ್ಠಿತ ‘ಚಾಂಪಿಯನ್’
ಪಟ್ಟಕ್ಕಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ
ಮ್ಯಾಡ್ರಿಡ್, ಏಕೈಕ ಗೋಲಿನ ನೆರವಿನಿಂದ (1-0) ಲೀಗ್ ಕಪ್ ವಿಜೇತ ಲಿವರ್‌ಪೂಲ್ ವಿರುದ್ಧ ಗೆದ್ದು ಬೀಗಿತು. 59ನೇ ನಿಮಿಷದಲ್ಲಿ ಫೆಡೆರಿಕೊ ವಾಲ್ವರ್ಡೆ ನೀಡಿದ ಪಾಸ್ ಪಡೆದ ಬ್ರೆಝಿಲ್‌ನ ವಿಂಗರ್ ವಿನಿಶಿಯಸ್ ಜೂನಿಯರ್ ಸುಲಭವಾಗಿಯೇ ಚೆಂಡನ್ನು ಗುರಿ ಮುಟ್ಟಿಸಿದರು.

ಫೈನಲ್ ಪಂದ್ಯದ ಮೊದಲಾರ್ಧದ 43ನೇ ನಿಮಿಷದಲ್ಲಿ ಕರೀಮ್ ಬೆಂಝಮಾ, ರಿಯಲ್ ಮ್ಯಾಡ್ರಿಡ್‌ಗೆ ಮುನ್ನಡೆ ಒದಗಿಸಿದ್ದರು. ಆದರೆ ಲೈನ್ ರೆಫರಿ ಆಫ್‌ಸೈಡ್ ತೀರ್ಮಾನ ನೀಡಿದ ಪರಿಣಾಮ ವಿಎಆರ್ (ವೀಡಿಯೋ ಅಸಿಸ್ಟೆಂಟ್
ರೆಫ್ರಿ) ಮೊರೆ ಹೋಗಲಾಯಿತು. ವೀಡಿಯೋ ಪರೀಕ್ಷಿಸಿದ ಬಳಿಕ, ಲೈನ್ ರೆಫರಿ ನೀಡಿದ್ದ ತೀರ್ಮಾನವನ್ನು ಎತ್ತಿಹಿಡಿಯಲಾಯಿತು.

ದಿ ಫ್ರಾನ್ಸ್ ಸ್ಟೇಡಿಯಂನಲ್ಲಿ ಪ್ರತಿಷ್ಠಿತ ‘ಚಾಂಪಿಯನ್’
ಪಟ್ಟಕ್ಕಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ
ಮ್ಯಾಡ್ರಿಡ್, ಏಕೈಕ ಗೋಲಿನ ನೆರವಿನಿಂದ (1-0) ಲೀಗ್ ಕಪ್ ವಿಜೇತ ಲಿವರ್‌ಪೂಲ್ ವಿರುದ್ಧ ಗೆದ್ದು ಬೀಗಿತು. 59ನೇ ನಿಮಿಷದಲ್ಲಿ ಫೆಡೆರಿಕೊ ವಾಲ್ವರ್ಡೆ ನೀಡಿದ ಪಾಸ್ ಪಡೆದ ಬ್ರೆಝಿಲ್‌ನ ವಿಂಗರ್ ವಿನಿಶಿಯಸ್ ಜೂನಿಯರ್ ಸುಲಭವಾಗಿಯೇ ಚೆಂಡನ್ನು ಗುರಿ ಮುಟ್ಟಿಸಿದರು.

ಫೈನಲ್ ಪಂದ್ಯದ ಮೊದಲಾರ್ಧದ 43ನೇ ನಿಮಿಷದಲ್ಲಿ ಕರೀಮ್ ಬೆಂಝಮಾ, ರಿಯಲ್ ಮ್ಯಾಡ್ರಿಡ್‌ಗೆ ಮುನ್ನಡೆ ಒದಗಿಸಿದ್ದರು. ಆದರೆ ಲೈನ್ ರೆಫರಿ ಆಫ್‌ಸೈಡ್ ತೀರ್ಮಾನ ನೀಡಿದ ಪರಿಣಾಮ ವಿಎಆರ್ (ವೀಡಿಯೋ ಅಸಿಸ್ಟೆಂಟ್  ರೆಫ್ರಿ) ಮೊರೆ ಹೋಗಲಾಯಿತು. ವೀಡಿಯೋ ಪರೀಕ್ಷಿಸಿದ
ಬಳಿಕ. ಲೆನ್ ರೆಪರಿ ನೀಡಿದ ತೀರ್ಮಾನವನ್ನು ಎತ್ತಿ ಹಿಡಿಯಲಾಯಿತು.

ಲಿವರ್‌ಪೂಲ್ ಮಿಡ್‌ಫೀಲ್ಡರ್ ಫ್ಯಾಬಿನ್ನೋ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲು ವಿಫಲವಾದ ಕ್ಷಣದ ಲಾಭ ಪಡೆದಿದ್ದ ಬೆಂಝಮಾ, ರಕ್ಷಣಾ ಆಟಗಾರರ ಕಾಲ್ತಪ್ಪಿಸಿ ಗೋಲು ದಾಖಲಿಸಿದ್ದರು. ಈ ಗೋಲು ಮಾನ್ಯವಾಗುತ್ತಿದ್ದರೆ ಯುಸಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ
ಬೆಂಝಮಾ ಗೋಲು ಗಳಿಕೆ 16ಕ್ಕೇರುತ್ತಿತ್ತು. ಬೆಂಝಮಾ ಗೋಲು ಗಳಿಸದ ಹೊರತಾಗಿಯೂ ಮ್ಯಾಡ್ರಿಡ್ ಗೆಲುವಿನ ಪತಾಕೆ ಹಾರಿಸಿತು.

ತಡೆಗೋಡೆ’ಯಾದ ಥಿಬೌಟ್ ಕೋರ್ಟೋಯಿಸ್!
7ನೇ ಯುಸಿಎಲ್ ಕಿರೀಟದ ಮೇಲೆ ಕಣ್ಣಿಟ್ಟಿದ್ದ ಎರ್ಗನ್ ಕೊಪ್ ಪಡೆಗೆ, ಮ್ಯಾಡ್ರಿಡ್ ಗೋಲು ಬಲೆಯನ್ನು ಕಾದ ಥಿಬೌಟ್ ಕೋರ್ಟೊಯಿಸ್ ತಡೆಗೋಡೆಯಾದರು. ಲಿವರ್‌ಪೂಲ್ ಆಟಗಾರರು 9 ಬಾರಿ ಮ್ಯಾಡ್ರಿಡ್ ಗೋಲು ಬಲೆಯೊಳಗೆ ಚೆಂಡನ್ನು ಗುರಿಯಾಗಿಸಿದರೂ, ಗುರಿ ಮುಟ್ಟಲು ಗೋಲ್ ಕೀಪರ್ ಕೋರ್ಟೊಯಿಸ್ ಅವಕಾಶ
ನೀಡಿಲಿಲ್ಲ. ಅರ್ಹವಾಗಿಯೇ ಫೈನಲ್ ಪಂದ್ಯದ
ಪಂದ್ಯಶ್ರೇಷ್ಠ ಪ್ರಶಸ್ತಿಯೂ ಬೆಲ್ಲಿಯನ್ ಆಟಗಾರನ
ಪಾಲಾಯಿತು.

 

75 ಸಾವಿರ ಅಭಿಮಾನಿಗಳ ಜೊತೆ ಪಂದ್ಯ ವೀಕ್ಷಿಸಿದ
ಗಣ್ಯರು
ಟೆನಿಸ್ ದಿಗ್ಗಜ ರಫೆಲ್ ನಡಾಲ್, ಅಮೆರಿಕದ ಗಾಯಕಿ, ನಟಿ ಮತ್ತು ಗೀತರಚನೆಕಾರ ಕ್ಯಾಮಿಲಾ ಕ್ಯಾಚಿಲ್ಲೋ, ರಿಯಲ್ ಮ್ಯಾಡ್ರಿಡ್‌ನ ಮಾಜಿ ಕೋಚ್ ಮತ್ತು ಆಟಗಾರ ಝಿನೆದಿನ್ ಝಿದಾನ್, ಲೂಯಿಸ್ ಫಿಗೋ, ರೌಲ್  ಗೊನ್ಸಾಲ್ವೆಝ್, ಲಾಸ್ ಏಂಜಲಿಸ್‌ನ ಲೇಕರ್ಸ್ ತಂಡದ ಫಾರ್ವಡ್್ರ ಆಟಗಾರ ಲೆಬ್ರಾನ್ ಜೇಮ್ಸ್ ಸೇರಿದಂತೆ
ಅನೇಕ ಗಣ್ಯರು ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ
ಆಗಮಿಸಿದ್ದರು. 75 ಸಾವಿರ ಮಂದಿಗೆ ಕುಳಿತುಕೊಳ್ಳಲು ಅವಕಾಶವಿರುವ
ಮೈದಾನದ ಗ್ಯಾಲರಿಗಳು ಭರ್ತಿಯಾಗಿದ್ದವು. ಇದಾದ ಬಳಿಕ ಸಾವಿರಾರು ಅಭಿಮಾನಿಗಳು ಮೈದಾನವನ್ನು ಪ್ರವೇಶಿಸಲು ಮುನ್ನುಗಿದ ಕಾರಣ ಪಂದ್ಯವು 35  ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಜಲಫಿರಂಗಿ ಪ್ರಯೋಗಿಸಿ ಅಭಿಮಾನಿಗಳನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರು ಬಳಿಕ ಪೆಪ್ಪರ್ ಸ್ಪೇ ಬಳಸಿದ್ದಾರೆ. ಈ ವೀಡಿಯೋಗಳು ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!