ರಾಷ್ಟ್ರೀಯ
ಇಂದಿನ ಕೊರೋನಾ ಪ್ರಕರಣ ವಿವರ
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,338 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ.
ಈ ಮೂಲಕ ಒಟ್ಟು ಪ್ರಕರಣಗಳ ಒಟ್ಟು ಸಂಖ್ಯೆ
4,31,58,087ಕ್ಕೆ ಏರಿಕೆಯಾಗಿದೆ, ಕೋವಿಡ್ ನಿಂದ
ಸಾವನ್ನಪ್ಪಿರುವವರ ಸಂಖ್ಯೆ 5,24,630ಕ್ಕೆ
ಏರಿಕೆಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 17,885ಕ್ಕೆ ಇಳಿಕೆಯಾಗಿದೆ.
24 ಗಂಟೆಗಳಲ್ಲಿ 2,134 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 4,26,15,574ಕ್ಕೆ ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೆ 1,93,45,19,805 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.