ರಾಷ್ಟ್ರೀಯ
ಇಂದಿನ ಕೊರೋನಾ ಪ್ರಕರಣ ವಿವರ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3712 ಹೊಸ ಕೋವಿಡ್
ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಕಳೆದ 24
ಗಂಟೆಗಳಲ್ಲಿ 2584 ಮಂದಿ ಕೋವಿಡ್‌ನಿಂದ
ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಟಾರ್ಜ್ ಆಗಿದ್ದಾರೆ
ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವಾಲಯವು ಅಧಿಕೃತ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಐವರು ಕೋವಿಡ್‌ನಿಂದ
ಸಾವನ್ನಪ್ಪಿದ್ದಾರೆ. ಬುಧವಾರದಂದು ದೇಶದಲ್ಲಿ 24
ಗಂಟೆಗಳಲ್ಲಿ 2745 ಮಂದಿ ಕೋವಿಡ್ ಸೋಂಕಿಗೆ
ಒಳಗಾಗಿದ್ದರು ಹಾಗೂ ಆರು ಮಂದಿ ಸಾವನ್ನಪ್ಪಿದ್ದರು.
ದೇಶದಲ್ಲಿ ಪ್ರಸ್ತುತ 19,509 ಕೊರೊನಾ ಸಕ್ರಿಯ
ಪ್ರಕರಣಗಳು ಇವೆ ಹಾಗೂ ದೇಶದಲ್ಲಿ ಒಟ್ಟು ಸಾವಿನ
ಸಂಖ್ಯೆಯು 5,24,641ಕ್ಕೆ ಏರಿಕೆ ಕಂಡಿದೆ.