ಕರಾವಳಿ

ಭಿಕ್ಷಾಟನೆ ನಡೆಸುತ್ತಿದ್ದ ಮಹಿಳೆಯ ಜೊತೆಗೆ 1 ವರ್ಷ ಪ್ರಾಯದ ಹೆಣ್ಣು ಮಗುವನ್ನು ರಕ್ಷಿಸಿದ ಮಂಗಳೂರು ಚೈಲ್ಡ್ ಲೈನ್

ಮಂಗಳೂರು: ಮಂಗಳೂರಿನ ನಂತೂರು ಸರ್ಕಲ್ ಬಳಿ
ಅಪ್ರಾಪ್ತ ವಯಸ್ಸಿನ ಮಕ್ಕಳು ಭಿಕ್ಷಾಟನೆ ನಡೆಸುತ್ತಾ
ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬುದಾಗಿ
ಸಾರ್ವಜನಿಕರಿಂದ ಚೈಲ್ಡ್ ಲೈನ್ -1098 ಕ್ಕೆ ಮಾಹಿತಿ
ಬಂದಿರುವ ಹಿನ್ನಲೆಯಲ್ಲಿ ಚೈಲ್ಡ್ ಲೈನ್ ತಂಡವು ನಂತೂರಿನ ಸ್ಥಳಕ್ಕೆ ತೆರಳಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದ ಬೆಂಗಳೂರಿನ ತಾವರೆಕೆರೆಯ ಮಹಿಳೆ ಹಾಗೂ ಆಕೆಯbಬಳಿಯಿದ್ದ 1 ವರ್ಷದ ಪ್ರಾಯದ ಹೆಣ್ಣುಮಗುವನ್ನು ರಕ್ಷಿಸಿbಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಮಹಿಳಾbಘಟಕದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಚೈಲ್ಡ್ ಲೈನ್ ನ ಕೇಂದ್ರ
ಸಂಯೋಜಕರಾದ ದೀಕ್ಷಿತ್ ಅಚ್ಚಪ್ಪಾಡಿ, ಸಿಬ್ಬಂದಿಗಳಾದ
ಆಶಾಲತ ಕುಂಪಲ, ಹಾಗೂ ಜಯಂತಿ ಸ್ವಯಂ ಸೇವಕರಾದ ಕವನ್ ಕಬಕ ಜೊತೆಗಿದ್ದರು.

ನಗರದ ನಂತೂರನ್ನೇ ಕೇಂದ್ರವನ್ನಾಗಿಸಿ ವಲಸೆ
ಕುಟುಂಬಗಳು ಮಕ್ಕಳನ್ನು ಭಿಕ್ಷಾಟನೆಯಲ್ಲಿ
ತೊಡಗಿಸಿಕೊಂಡಿದ್ದಾರೆ. ಅವರದೇ ಮಗುವೆನ್ನುವುದಕ್ಕೆ ಸ್ಪಷ್ಟ ದಾಖಲೆಗಳು ಇವರುಗಳ ಬಳಿ ಇಲ್ಲದಿರುವುದು
ಕಂಡುಬಂದಿದೆ.

ಆದ್ದರಿಂದ ಭಿಕ್ಷಾಟನೆ ನಿರತ ಮಕ್ಕಳು ನಗರದಲ್ಲಿ ಕಂಡುಬಂದಲ್ಲಿ ದಯವಿಟ್ಟು ಹಣದ ರೂಪದಲ್ಲಿ
ಭಿಕ್ಷೆ ನೀಡಬೇಡಿ, ಕೂಡಲೇ ಚೈಲ್ಡ್ ಲೈನ್ -1098 ಕ್ಕೆ
ಕರೆಮಾಡಿ ಮಾಹಿತಿ ನೀಡಲು ಕೋರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!