ಕರಾವಳಿತಾಜಾ ಸುದ್ದಿಗಳು

ಮಣಿಪಾಲ ಆರೋಗ್ಯ ಕಾರ್ಡ್ ಸ್ಕಿಮ್ 2022 ಉದ್ಘಾಟನೆ

ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ ನೆಟ್‌ವರ್ಕ್ ಆಫ್ ಹಾಸ್ಪಿಟಲ್ಸ್ ವತಿಯಿಂದ ಆಯೋಜಿಸಲಾದ “ಮಣಿಪಾಲ್ ಆರೋಗ್ಯ ಕಾರ್ಡ್ ಸ್ಕಿಮ್ 2022” ರ ಉದ್ಘಾಟನೆಯನ್ನು ಇಂದು ದಿನಾಂಕ 04-06-2022 ರಂದು ಶಾಸಕರಾದ ಕೆ. ರಘುಪತಿ ಭಟ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಪ್ರೊ ಚಾನ್ಸಲರ್ ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಮಣಿಪಾಲದ ವಾಯ್ಸ್ ಚಾನ್ಸಲರ್ ಎಂ.ಡಿ ವೆಂಕಟೇಶ್, ಪ್ರೋ ವಾಯ್ಸ್ ಚಾನ್ಸಲರ್ ಪಿ.ಎಲ್.ಎನ್.ಜಿ ರಾವ್, ವೆಂಕಟರಾಯ ಎಂ. ಪ್ರಭು, ಮಾಹೆ ಮಂಗಳೂರಿನ ಪ್ರೊ ವಾಯ್ಸ್ ಚಾನ್ಸಲರ್ ದಿಲೀಪ್ ಜಿ ನಾಯ್ಕ್, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬಿ. ಉನ್ನಿಕೃಷ್ಣನ್, ಶರತ್ ಕುಮಾರ್ ರಾವ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!