ಕರಾವಳಿತಾಜಾ ಸುದ್ದಿಗಳು
ಅಕ್ಷರವೆಂದರೆ ಶ್ರೀಕೃಷ್ಣ : ಪುತ್ತಿಗೆ ಶ್ರೀ
ಕಾರ್ಕಳ: ಅಕ್ಷರವೆಂದರೆ ಶ್ರೀಕೃಷ್ಣನೆಂದೇ ಅರ್ಥ. ಹೀಗಾಗಿ ಅಕ್ಷರಾಭ್ಯಾಸ ಮಾಡುವುದೆಂದರೆ ಕೃಷ್ಣನ ಆರಾಧನೆ ಭಗವದ್ಗೀತೆಯನ್ನು ಬರೆಯುದೆಂದರಂತೂ ಪುಣ್ಯಾತಿ ಪುಣ್ಯದ ಕಾರ್ಯ ಎಂದು ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹೊಸ ಸೇರ್ಪಡೆಯ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು. 150 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶ್ರೀಪಾದರು ಕೋಟಿಗೀತಾ
ಲೇಖನ ಯಜ್ಞದ ದೀಕ್ಷಾ ಸಂಕಲ್ಪ ಭೋದಿಸಿ ಪುಸ್ತಕ
ಸೂತ್ರಗಳನ್ನು ವಿತರಿಸಿದರು.
ಓಮನ್ ನ ಉದ್ಯಮಿ ರಾಜೇಂದ್ರ ಎಂ ಶೆಟ್ಟಿ ಮುಖ್ಯ
ಅತಿಥಿಗಳಾಗಿದ್ದರು. ಜೆಸಿ ಎಜುಕೇಷನ್ ಸೊಸೈಟಿಯ
ಅಧ್ಯಕ್ಷಾ ಚಿತ್ತರಂಜನ್ ಶೆಟ್ಟಿ, ಜೆಸಿ ಪದಾಧಿಕಾರಿಗಳು,
ಮುಖ್ಯೋಪಾದ್ಯಾಯಿನಿ, ಶಿಕ್ಷಕಿ ವಂದನಾ ರೈ, ಶ್ರೀ ಮಠದ ರತೀಶ್ ತಂತ್ರಿ, ರಮಣಾಚಾರ್ಯ, ಶಾಲಾ ಶಿಕ್ಷಕ ವೃಂದ, ಪಾಲಕರು ಉಪಸ್ಥಿತರಿದ್ದರು.