ವಿಶೇಷ ಲೇಖನಗಳು

ವೃತ್ತಿ ತರಬೇತಿ – ಅರ್ಜಿ ಆಹ್ವಾನ

ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆ ವತಿಯಿಂದ ಹೆಚ್.ಸಿ.ಎಲ್.
ಟೆಕ್ನಲಾಜೀಸ್ ಟೆಕ್-ಬೀ ಯಲ್ಲಿ ಆರಂಭಿಕ ವೃತ್ತಿ ಜೀವನದ
ಕುರಿತ ತರಬೇತಿಗೆ 2020-21 ನೇ ಸಾಲಿನಲ್ಲಿ ಪಿ.ಯು.ಸಿ.ಯಲ್ಲಿ ಗಣಿತ ಹಾಗೂ ವ್ಯವಹಾರ ಗಣಿತ ವಿಷಯಗಳೊಂದಿಗೆ ಪಾಸಾಗಿರುವ ಮತ್ತು ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ 12 ತಿಂಗಳ ತರಬೇತಿಯ ನಂತರ ಹೆಚ್.ಸಿ.ಎಲ್. ಟೆಕ್ನಲಾಜೀಸ್ ಟೆಕ್-ಬೀ ನಲ್ಲಿ ಕೆಲಸದ ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ https://bit.ly/techbee2022 ಅಥವಾ
ಮೊ.ನಂ: 9845454471, 9019307267, 7619292747 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!