ರಾಜ್ಯ
ರಾಜ್ಯದಲ್ಲಿ 7 ಡಿಜಿಟಲ್ ವಿವಿ ಸ್ಥಾಪನೆ ಶೀಘ್ರ: ಸಿಎಂ ಬಸವರಾಜ ಬೊಮ್ಮಾಯಿ
ಬೆಳಗಾವಿ: ಶೀಘ್ರದಲ್ಲೇ ರಾಜ್ಯದಲ್ಲಿ ಏಳು ಡಿಜಿಟಲ್
ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿಯಲ್ಲಿ ಶನಿವಾರ ವಿಧಾನ ಪರಿಷತ್
ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ
ಅವರು, ರಾಜ್ಯದಲ್ಲಿ ತಾಂತ್ರಿಕ ಜ್ಞಾನ ಹಾಗೂ ಕೌಶಲ
ಸಾಮರ್ಥ್ಯ ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ವಿಶಿಷ್ಟ ರೀತಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು ಎಂದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಮೆಡಿಕಲ್ ರಿಸರ್ಚ್’ ಆರಂಭಿಸಲಾಗುತ್ತಿದೆ ಎಂದರು.
15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರ
ಮುಗಿಯಲಿದೆ. ಪದವಿ ಕಾಲೇಜುಗಳಲ್ಲಿ 6,000
ಸ್ಮಾರ್ಟ್ಕ್ಲಾಸ್ ತೆರೆಯಲು ಆದೇಶಿಸಿದ್ದೇನೆ. ಏಳು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ
ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು
ವಿವರಿಸಿದರು.