ರಾಜ್ಯ

ದಂತಚೋರ ವೀರಪ್ಪನ್‌ನಿಂದ ಬಚಾವಾಗಿದ್ದ ‘ಭೋಗೇಶ್ವರ’ ಇನ್ನಿಲ್ಲ

ಮೈಸೂರು: ವೀರಪ್ಪನ್ ಕಣ್ಣಿಗೆ ಬೀಳದೆ ಬಚಾವಾಗಿ, ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ 76 ವರ್ಷದ ‘ಭೋಗೇಶ್ವರ’ ಸಲಗ ಮೃತಪಟ್ಟಿದೆ.

ಉದ್ದ ದಂತ, ನಡಿಗೆ ಶೈಲಿಯಿಂದ ಇತರೆ ಆನೆಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಭೋಗೇಶ್ವರ ಆನೆ, 4 ಅಡಿಗಿಂತಲೂ ಹೆಚ್ಚು ಉದ್ದವಿರುವ ದಂತ ಹೊಂದಿತ್ತು. ಈ
ದಂತವೇ ಆನೆಯ ನಡಿಗೆಗೆ, ಆಹಾರ ಸೇವನೆಗೆ
ಅಡ್ಡಿಯಾಗುತ್ತಿತ್ತು.

ಬಂಡೀಪುರ, ನಾಗರಹೊಳೆ ಉದ್ಯಾನದಲ್ಲಿ ಬರುವ ಕಬಿನಿ ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ಆನೆಗಳ ಹಿಂಡು ಆಗಾಗ ಕಾಣಿಸಿಕೊಳ್ಳುತ್ತದೆ. ಆದರೆ ಈ ಆನೆ ಮಾತ್ರ
ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿತ್ತು.

ರಾಜ್ಯದಲ್ಲಿ 80 ಹಾಗೂ 90ರದ ದಶಕದಲ್ಲಿ ವೀರಪ್ಪನ್, ಕೇರಳದ ದಂತಚೋರರ ಕಾಟ ಜೋರಾಗಿತ್ತು. ಆ ದಿನಗಳಲ್ಲಿ ನಡೆದ ಆನೆಗಳ ಮಾರಣ ಹೋಮದಿಂದ ಬಂಡೀಪುರ ಮತ್ತು
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಂತಚೋರರ ಕಣ್ಣಿಗೆ ಬೀಳದೆ ಅಳಿದುಳಿದ ಆನೆಗಳಲ್ಲಿ ಈ ಭೋಗೇಶ್ವರ ಆನೆಯೂ ಒಂದಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!