ಉಡುಪಿ :ಕಾರ್ಕಳ – 40 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ಜಯಂತಣ್ಣ

ಕಾರ್ಕಳ :40 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ಜಯಂತಣ್ಣ
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ 40 ಸಾವಿರ ರೂ ಮೌಲ್ಯದ ಬೆಳ್ಳಿಯ ಆಭರಣಗಳ ಬ್ಯಾಗ್ ಬಿಟ್ಟು ಇಳಿದಿದ್ದ ಪ್ರಯಾಣಿಕನಿಗೆ ಮರೆತುಹೋಗಿದ್ದ ಬ್ಯಾಗ್ಅನ್ನು ತಲುಪಿಸುವ ಮೂಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ನಿಶ್ಮಿತಾ ಬಸ್ ಕಂಡಕ್ಟರ್ ಜಯಂತ್ ಎಂಬುವವರು ಮಾನವೀಯತೆ ಮೆರೆದ ಸಿಬ್ಬಂದಿ.
ಅಮರ್ ಎಂಬುವವರು ದಿನಾಂಕ 10 ಶುಕ್ರವಾರ ದಂದು ಕಾರ್ಕಳದಿಂದ ಮೂಡುಬಿದಿರೆಗೆ ಬಂದು ನಿಶ್ಮಿತಾ ಬಸ್ ನಲ್ಲಿ ಬಂದು ಬ್ಯಾಗ್ನ್ನು ಬಸ್ನಲ್ಲಿ ಬಿಟ್ಟು ಇಳಿದುಕೊಂಡಿದ್ದರು.
ಅಲ್ಲದೆ ಅಮರ್ ಮೂಲತಃ ಬೇರೆ ರಾಜ್ಯದವರಾಗಿದ್ದು ಬ್ಯಾಗ್ ಕಳೆದುಕೊಂಡ ಬಗ್ಗೆ ಉಡುಪಿಯ ಸ್ನೇಹಿತನಲ್ಲಿ ತಿಳಿಸಿದ್ದರು. ಕೂಡಲೇ ಟಿಕೆಟ್ ಮೂಲಕ ಕಾರ್ಕಳದ ಬಸ್ ಎಜೇಂಟ್ ಸುರೇಶ ರವರನ್ನು ಸಂಪರ್ಕಿಸಿದಾಗ ಕೂಡಲೇ ಜಯಂತ್ ರವರನ್ನು ಸಂಪರ್ಕಿಸಿದ್ದಾರೆ.ಜಯಂತ್ ರವರು ಬ್ಯಾಗ್ ನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಮೂಲಕ ಜಯಂತ್ ರವರು ಇಲಾಖೆ ಸಿಬ್ಬಂದಿಗೆ ಮಾದರಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.