ಕರಾವಳಿ

ಉಡುಪಿ: ಬಿಆರ್‌ಎಸ್ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಕಳವು- ದೂರು ದಾಖಲು

ಉಡುಪಿ : ಆಸ್ಪತ್ರೆಯೊಂದರಲ್ಲಿ ಎಂಜಿನಿಯಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೋರ್ವರ ಕಂಪ್ಯೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ ನಗರದ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ
ಆಸ್ಪತ್ರೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪ್ರಕಾರ್ ಎಸ್. ಅವರ ಸುಮಾರು 8 ಸಾವಿರ ರೂ.ಮೌಲ್ಯದ ಕಂಪ್ಯೂಟರ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

ಪ್ರಕಾಶ್ ಅವರು ಜೂ. 11ರ ಮಧ್ಯಾಹ್ನ 2 ಗಂಟೆಗೆ ಮೇಲಾಧಿಕಾರಿಯವರ ಅನುಮತಿ ಪಡೆದು
ರಜೆಯಲ್ಲಿ ತೆರಳಿದ್ದು, ಮರುದಿನ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಈ ವೇಳೆ ಅವರು ಕೆಲಸ
ಮಾಡುತ್ತಿದ್ದ ಟೇಬಲ್ ಮೇಲಿದ್ದ ಕಂಪ್ಯೂಟರ್, ಸಿಪಿಯು, ಕೀಬೋರ್ಡ್, ಮೌಸ್ ನಾಪತ್ತೆಯಾಗಿತ್ತು.
ಹೀಗಾಗಿ 11ರ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗೆ 8.30ರೊಳಗೆ ಕಂಪ್ಯೂಟರ್ ಕಳವಾಗಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!