ರಾಜ್ಯ
ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

ಬೆಂಗಳೂರು: 2022 ನೇ ಸಾಲಿನ ಕರ್ನಾಟಕ ಸಾಮಾನ್ಯ ಪರೀಕ್ಷೆ,(ಸಿಇಟಿ) ಗುರವಾರ, ಶುಕ್ರವಾರ ಮತ್ತು ಶನಿವಾರ ರಾಜ್ಯದ 486 ಕೇಂದ್ರಗಳಲ್ಲಿ ನಡೆಯಲಿದೆ.
ಈ ಬಾರಿ 2,16,225 ವಿದ್ಯಾರ್ಥಿಗಳು ಹೆಸರನ್ನು
ನೋಂದಾಯಿಸಿದ್ದಾರೆ. ಕರ್ಣಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಮಾರ್ಗಸಚಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷಾ ಕೊಠಡಿಯ ಒಳಗೆ ಬ್ಲೂಟೂತ್, ಮೋಬೈಲ್ ಫೋನ್, ಕೈ ಗಡಿಯಾರ, ಎಲೆಕ್ಟ್ರಾನಿಕ್ ಗೆಜೆಟ್ ತರುವಂತಿಲ್ಲ,ಜೊತೆಗೆ ತಲೆ, ಕಿವಿ ಮುಚ್ಚುವಂತಹ ಬಟ್ಟೆಗಳಿಗೆ ಅವಕಾಶವಿಲ್ಲ ಎಂದು ಆದೇಶಿಸಿದ್ದಾರೆ.