ಇಂದು ಸಂಜೆ ಪುರಭವನದಲ್ಲಿ ‘ಜಾನಪದ ಉತ್ಸವ 2022 ಕಾರ್ಯಕ್ರಮ

ಉಡುಪಿ: ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ
ಜಿಲ್ಲಾ ಘಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಾಡಿನ ಜಾನಪದ ಕಲೆ ಮತ್ತು ಸಂಸ್ಕೃತಿಗಳನ್ನು ಅನಾವರಣಗೊಳಿಸುವ’ಜಾನಪದ ಉತ್ಸವ 2022′ ಕಾರ್ಯಕ್ರಮ ಶನಿವಾರ, ಜೂನ್ 18 ರಂದು ಸಂಜೆ 3:30 ರಿಂದ 1 ಗಂಟೆವರೆಗೆ ಅಜ್ಜರಕಾಡಿನ ಪುರಭವನದಲ್ಲಿ ಜರುಗಲಿದೆ.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಜಾನಪದ
ಪ್ರಶಸ್ತಿ ಪ್ರದಾನ ನಡೆಯಲಿದ್ದು, ಕಾರ್ಯಕ್ರಮದಲ್ಲಿ
ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಘಟಕಗಳ
ಪದಗ್ರಹಣ ಮತ್ತು ಶ್ರೀಮತಿ ವಿಜಯ ಗೋಪಾಲ
ಬಂಗೇರರ ನೆನಪಿನಂಗಳದಿಂದ ಪುಸ್ತಕ ಬಿಡುಗಡೆ
ನಡೆಯಲಿದೆ.
ಸಂಜೆ 2.30ಕ್ಕೆ ಜೋಡುಕಟ್ಟೆಯಿಂದ ಮೆರವಣಿಗೆ
ನಡೆಯಲಿದೆ. ರಾಜ್ಯದೆಲ್ಲೆಡೆಯ ಕಲಾವಿದರಿಂದ
ವೈವಿಧ್ಯಮಯ ಜಾನಪದ ಕಲೆಗಳ ಪ್ರದರ್ಶನ
ನಡೆಯಲಿದೆ. ಈ ಬಾರಿಯ ಜಾನಪದ ಪ್ರಶಸ್ತಿ
ಪುರಸ್ಕೃತ ಪ್ರದೀಪ್ ಚಂದ್ರ ಕುತ್ಪಾಡಿ
ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ. ತಲ್ಲೂರು
ಶಿವರಾಮ್ ಶೆಟ್ಟಿ ತಿಳಿಸಿದ್ದಾರೆ.