ಕರಾವಳಿ
ಮಣಿಪಾಲದಲ್ಲಿ ಗಾಂಜಾ ಸೇವನೆ: ಯುವಕ ಪೊಲೀಸ್ ವಶಕ್ಕೆ..!

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ
ಯುವಕನೋರ್ವನನ್ನು ಮಣಿಪಾಲ ಪೊಲೀಸರು
ವಶಕ್ಕೆ ಪಡೆದಿರುವ ಘಟನೆ ಮಣಿಪಾಲ ವಿದ್ಯಾರತ್ನ
ನಗರದಲ್ಲಿ ನಡೆದಿದೆ.
ಕುಕ್ಕಿಕಟ್ಟೆಯ 24 ವರ್ಷದ ನಿಹಾತ್ ಎಂಬಾತನನ್ನು
ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಜೂ.11ರಂದು ವಿದ್ಯಾರತ್ನ ನಗರದ ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಜೂ.17 ರಂದು ವೈದ್ಯರು ನೀಡಿರುವ ವರದಿಯಲ್ಲಿ
ನಿಹಾತ್ ಗಾಂಜಾ ಸೇವನೆ ಮಾಡಿರುವುದು
ದೃಢಪಟ್ಟಿದೆ. ಈ ಸಂಬಂಧ ಮಣಿಪಾಲ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.