ಕರಾವಳಿ
ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಹಲ್ಲೆ ; ದೂರು ದಾಖಲು
ಉಡುಪಿ : ಲಗೇಜ್ ಬಾಕ್ಸ್ ನ ಕೀ ನಿಂದ ಮುಖಕ್ಕೆ ಚುಚ್ಚಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಈ ಬಗ್ಗೆ ಕೊಡವೂರು ಗ್ರಾಮದ ಹಿತಾರಾಜ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಹಿತಾರಾಜ ಅವರು ಜೂ. 21 ರಂದು ಉಡುಪಿಗೆ ಬಂದಿದ್ದರು. ಈ ವೇಳೆ ಶಿರ್ವ ಮಂಚಕಲ್ ಕಡೆ ಹೋಗುವ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬೆಂಗಳೂರಿಗೆ ಹೋಗುವ ಬಸ್ ನ ಹಿಂಭಾಗದ ಲಗೇಜ್ ಇಡುವ ಜಾಗದ ಬಾಗಿಲು ತೆರೆದಿಟ್ಟಿದ್ದು, ಇದರ ಬಗ್ಗೆ ಬಸ್‌ನ ಬಳಿ ನಿಂತಿದ್ದ ವ್ಯಕ್ತಿ ಬಳಿ ಬಸ್ ಹಿಂಭಾಗದ ಬಾಗಿಲನ್ನು ಯಾಕೆ ತೆರೆದಿಟ್ಟಿದ್ದು ಎಂದು ಪ್ರಶ್ನಿಸಿದಕ್ಕೆ ಆತ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆತನ ಕೈಯಲ್ಲಿದ್ದ ಲಗೇಜ್ ಬಾಕ್ಸ್ನ ಕೀ ಯಿಂದ ಇವರ ಕಣ್ಣಿನ ಭಾಗದಲ್ಲಿ ಚುಚ್ಚಿ ಗಾಯಗೊಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.