ಉದ್ಯಮಿ ಕೊಲೆ ಕೇಸ್: ಬನ್ನಂಜೆ ರಾಜಾ, ಉಡುಪಿಯ ಗಣೇಶ್ ಭಜಂತ್ರಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಳಗಾವಿ :ಹಫ್ತಾಕೆ ಬೇಡಿಕೆ ಇಟ್ಟು ಕೊಡದ ಕಾರಣಕ್ಕಾಗಿ ಅಂಕೋಲದ ಉದ್ಯಮಿ ಆರ್ ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ಬೆಳಗಾವಿಯ ಕೋಕಾ ನ್ಯಾಯಾಲದಿಂದ ಇಂದು (ಏಪ್ರಿಲ್ 4 ಸೋಮವಾರ ತೀರ್ಪು ಪ್ರಕಟಿಸಲಾಗಿದೆ
3ಕೋಟಿ ಹಫ್ತಾ ನೀಡದಿದ್ದಕ್ಕೆ ಆರ್.ಎನ್.ನಾಯಕ್ ಹತ್ಯೆ
ಮಾಡಲಾಗಿತ್ತು.ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ
2013ರ ಡಿಸೆಂಬರ್ 21 ರಂದು ಉದ್ಯಮಿ ನಾಯಕ್
ಕೋಲಿಯಾಗಿತ್ತು. ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಸಾಬೀತಾಗಿತ್ತು.
ಈ ಹಿನ್ನೆಲೆ, ಬನ್ನಂಜೆ ರಾಜಾ ಸೇರಿ ನಾಲ್ಕು
ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದಲ್ಲಿ ಕ್ರಮವಾಗಿ 2,3 ಮತ್ತು ನಾಲ್ಕನೆ
ಆರೋಪಿಗಳಾಗಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಬೆಂಗಳೂರಿನ ಅಭಿ ಬಂಡಗಾರ್, ಉಡುಪಿಯ
ಗಣೇಶ್ ಭಜಂತ್ರಿ ಆಗಿದ್ದು 9ನೇ ಆರೋಪಿಯಾಗಿರುವ
ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಾಲ್ಕು ಮಂದಿಯ ಹೆಸರು ಈ ರೀತಿ ಇದೆ:
A-2 ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್
A-3 ಬೆಂಗಳೂರಿನ ಅಭಿ ಬಂಡಗಾರ್,
A-4 ಉಡುಪಿಯ ಗಣೇಶ್ ಭಜಂತ್ರಿ
A-9 ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟ
ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್.
ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬನ್ನಂಜೆ ರಾಜ
ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ
ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12
ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜ ಬಂಧನವಾಗಿತ್ತು.
ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ
ಮೊರದಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತಕ್ಕೆ ಭೂಗತಪಾತಕಿ ಬನ್ನಂಜೆ ರಾಜ ಹಸ್ತಾಂತರಿಸಲಾಗಿತ್ತು.
2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜ
ಕರೆತರಲಾಗಿತ್ತು, 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ
ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಇಂದು ಅಂತಿಮ
ತೀರ್ಪು ಪ್ರಕಟಿಸಿದೆ. ಭೂಗತ ಪಾತಕಿ ಬನ್ನಂಜೆ ರಾಜ ಸೇರಿ
ಮೂವರು ಆರೋಪಿಗಳ ಭವಿಷ್ಯ ಇಂದು ನಿರ್ಧಾರ ಆಗಿದೆ.
ಹಿರಿಯ ವಕೀಲ ಕೆ.ಜಿ. ಪುರಾಣಿಕಮಠ ಸರ್ಕಾರದ ಪರ
ವಕಾಲತ್ತು ವಹಿಸಿದ್ದರು.