ಮೆಂತೆ ಸೊಪ್ಪು ಮತ್ತು ಮೆಂತೆ ಬೀಜದ ಆರೋಗ್ಯವರ್ಧಕ ಗುಣ ಬಲ್ಲಿರಾ..?

ಮೆಂತ್ಯ ಎಲ್ಲರ ಮನೆಯಲ್ಲಿ ನಿತ್ಯ ಉಪಯೋಗಿಸುವ ಅತಿ ಉಪಯುಕ್ತ ಸಾಂಬಾರ ವಸ್ತು. ಇದನ್ನು ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಿಸಬಹುದು. ಮೆಂತ್ಯ ದಿವಸಾ ಯಾವುದಾದರೂ ರೂಪದಲ್ಲಿ ಉಪಯೋಗಿಸುತ್ತಿದ್ದರೆ, ಸಹಜವಾಗಿ ವಯಸ್ಸು ಆದಂತೆ ಸಾಯುವ ಜೀವ ಕೋಶಗಳು ಮತ್ತೆ ಜೀವ ಪಡೆಯುತ್ತವೆ.
ಮೆಂತ್ಯದ, ಹಾಗೂ ಮೆಂತ್ಯದ ಸೊಪ್ಪನ ಉಪಯೋಗ:-
1)ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಮತ್ತು ರಕ್ತಭೇದಿ ನಿವಾರಣೆಯಾಗುತ್ತದೆ.
2)ಮೆಂತ್ಯದ ಕಾಳನ್ನು ನೆನೆಸಿ ಬೆಲ್ಲದ ಜತೆ ರುಬ್ಬಿ ಹಾಲಿನ ಜತೆ ಸೇರಿಸಿ ಪಾಯಸ ಮಾಡಿ ಕುಡಿದರೆ ಎದೆ ಹಾಲು ಹೆಚ್ಚುತ್ತದೆ.
3)ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಕ್ಷದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
4) ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಈ ಅವಧಿಯಲ್ಲಿ ಪ್ರತಿದಿನ ಬಿಸಿನೀರನ ಬದಲು ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಬೇಕು.
5) ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸಲು ಇದು ಸುಲಭ ಮಾರ್ಗ.
6) ಮೆಂತ್ಯದ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ ಮೈಕೈನೋವು, ಬೆನ್ನು ನೋವು, ಸೊಂಟ ನೋವು ಗುಣವಾಗುತ್ತದೆ.
7) ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಅಂಗೈ ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು ಅಂಗೈ ಉರಿ ಉಪಶಮನವಾಗುವುದು.
8) ನೆನೆಸಿದ ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ಅರೆದು ಸ್ವಲ್ಪ ನಿಂಬೆ ರಸ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ತಲೆಯಲ್ಲಿ ಹೊಟ್ಟು ಏಳುವುದಿಲ್ಲ ಹಾಗೂ ಕೂದಲು ಬೆಳವಣಿಗೆಗೆ ಬಹು ಸಹಕಾರಿಯಾಗಿರುತ್ತದೆ.
9) ಒಂದು ಕಪ್ಪು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ರಸ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ಶೀಘ್ರವೇ ನಿವಾರಣೆಯಾಗುತ್ತದೆ.
10) ಮೆಂತ್ಯದ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿಂದರೆ ಸಂಧಿವಾತ ರೋಗಗಳ ನೋವು ಗುಣ ಕಾಣುವುದು.
11) ಮೆಂತ್ಯದ ಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ, ಸಾಕಷ್ಟು ಉಪ್ಪು ಬೆರೆಸಿ ಮೆಣಸು ಮತ್ತು ಜೀರಿಗೆಯ ತುಪ್ಪದ ಒಗ್ಗರಣೆ ಹಾಕಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ.
12) ಮೆಂತ್ಯದ ಸೊಪ್ಪನ್ನು ಹೆಚ್ಚಿ ಬೇಳೆಯೊಂದಿಗೆ ಬೇಯಿಸಿ ಹುಳಿ ಮಾಡಿಕೊಂಡು ಕ್ರಮವಾಗಿ ಸೇವಿಸುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಿಗಳು ದೂರವಾಗುವುದು.
13) ಮೆಂತ್ಯದ ಪುಡಿಯನ್ನು ಮಿತವಾಗಿ ಬೆಳಿಗ್ಗೆ ಮಜ್ಜಿಗೆಯಲ್ಲಿ ಸೇವಿಸಿದರೆ ಮಧುಮೇಹ ರೋಗಕ್ಕೆ ಒಳ್ಳೆಯದು. ಅದು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.ವಾತ ಹೆಚ್ಚಾಗಿ ಸಂಧಿಗಳಲ್ಲಿ ನೋವಿದ್ದರೆ ಮೆಂತ್ಯ ಸೊಪ್ಪಿಗೆ ಎಳ್ಳೆಣ್ಣೆ ಮತ್ತು ಸೈಂಧವ ಉಪ್ಪನ್ನು ಬೆರೆಸಿ ಚಿನ್ನಾಗಿ ಹುರಿದು ಬಟ್ಟೆಯಲ್ಲಿ ಕಟ್ಟಿ , ನೋವಿರುವ ಸಂಧಿಗಳಿಗೆ ಬಿಸಿ ಬಿಸಿ ಶಾಖ ಕೊಟ್ಟರೆ ನೋವು ಮತ್ತು ವಾತ ಕಡಿಮೆಯಾಗುತ್ತವೆ.
14) ಪ್ರತಿ ದಿನ ಮೆಂತ್ಯದ ಬೀಜದ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿದರೆ ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನಂಶ ಕರಗುತ್ತದೆ.
15) ಮೆಂತ್ಯದ ಕಾಳನ್ನು ತುಪ್ಪದಲ್ಲಿ ಕೆಂಪಾಗಿ ಹುರಿದು ಪುಡಿ ಮಾಡಿ ಅದಕ್ಕೆ ನಿಂಬೆರಸ ಮತ್ತು ಸೈಂಧವ ಉಪ್ಪನ್ನು ಬೆರೆಸಿ ಅನ್ನದ ಮೊದಲ ತುತ್ತಿನಲ್ಲಿ ಸೇವಿಸಿದರೆ ಅಜೀರ್ಣದಿಂದ ಕಾಡುವ ಹೊಟ್ಟೆ ನೋವು ಶಮನವಾಗುತ್ತದೆ.
16) ಮೆಂತ್ಯದ ಎಲೆಗಳನ್ನು ನೀರಲ್ಲಿ ಬೇಯಿಸಿ. ಅದು ತಣ್ಣಗಾದ ಮೇಲೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
17) ಮೆಂತ್ಯದ ಕಾಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಅದಕ್ಕೆ ತುಪ್ಪ ಹಾಕಿಕೊಂಡು ಕುಡಿದರೆ ವಾತದಿಂದ ಬರುವ ನೋವು ಶಮನವಾಗುತ್ತದೆ.
18) ದೇಹದ ಯಾವುದೇ ಭಾಗದಲ್ಲಿ ಊತ ಇದ್ದರೂ ಮೆಂತ್ಯದ ಕಾಳನ್ನು ನೆನೆಸಿ ಅರೆದು ಲೇಪಿಸಿದರೆ ಊತ ಬೇಗ ಕಡಿಮೆಯಾಗುತ್ತದೆ.
19)ಮೆಂತ್ಯದ ಕಾಳನ್ನು ಹುರಿದು ಅದರ ಜತೆ ಒಣ ದ್ರಾಕ್ಷಿ ಮತ್ತು ಸೈಂಧವ ಉಪ್ಪು ಸೇರಿಸಿ ಸೇವಿಸಿದರೆ ರಕ್ತ ಭೇದಿ ನಿಲ್ಲುತ್ತದೆ.
20) ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ.
21) ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ನೆರೆ ಕೂದಲಾಗುವುದು ನಿಲ್ಲುತ್ತದೆ.
22) ಮೆಂತ್ಯ ಕಾಳನ್ನು ಪುಡಿ ಮಾಡಿ ಒಂದು ಚಹಾ ಚಮಚ ನಿಂಬೆ ರಸ ಮತ್ತು ಜೇನಿನಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಗಂಟಲು ಕೆರೆತ ಮತ್ತು ಕೆಮ್ಮನ್ನೂ ಇದು ಗುಣಪಡಿಸುತ್ತದೆ.
23) ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊಂದಿಗೆ ತಿನ್ನುವುದರಿಂದ ಶಾರೀರಿಕ ನೋವು ಕಡಿಮೆಯಾಗುತ್ತದೆ.
24) ಮೆಂತ್ಯ, ದೊಡ್ಡಪತ್ರೆ, ಹಾಗಲಕಾಯಿ, ಅರಿಶಿಣ, ಸೀಬೆ ಚಿಗುರು ಕೊತ್ತಂಬರಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮೊಸರಿನಲ್ಲಿ ನುಣ್ಣಗೆ ಅರೆದು ಮೈಗೆ ಹಚ್ಚಿಕೊಳ್ಳಬೇಕು. ಇದರಿಂದ ದದ್ದು, ಪಿತ್ತದ ಗಂಧೆಗಳು ದೂರವಾಗುವುದು.
25) ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಚಮಚ ಹಸಿಶುಂಠಿ, ಜೇನುತುಪ್ಪ ಬೆರೆಸಿ ಕುಡಿದರೆ ಕಫ ಕರಗುತ್ತದೆ.
26) ಬೀಜದ ಚೂರ್ಣವನ್ನು ದಿನಕ್ಕೆ ಎರಡು ಬಾರಿ ಸಕ್ಕರೆ ಕಾಯಿಲೆಯಲ್ಲಿ, ರಕ್ತದೊತ್ತಡದಲ್ಲಿ, ನರ ದೌರ್ಬಲ್ಯಗಳಲ್ಲಿ ನೀಡಬೇಕು
27) ಸೊಪ್ಪಿನ ಕಲ್ಕವನ್ನು ಊತದಲ್ಲಿ ಲೇಪಿಸುವುದರಿಂದ ಊತವು ಕಡಿಮೆಯಾಗುತ್ತದೆ
28) ಮೆಂತ್ಯ ಸೊಪ್ಪಿನಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆ ಇರುವವರಿಗೆ ನೀಡಬೇಕು
29) ಮೆಂತ್ಯ ಸೊಪ್ಪನ್ನು ಜೀರ್ಣಶಕ್ತಿ ವೃದ್ಧಿಸಲು ಆಹಾರದಲ್ಲಿ ಸೇರಿಸುತ್ತಾರೆ
30) ಮೆಂತ್ಯ ಕಲ್ಕ ತಲೆಗೆ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ.
31). ಸಿಸರಿನ್ ಹೆರಿಗೆಯಾದ ನಂತರ ಗರ್ಭಕೋಶ ಸ್ಥಳಾಂತರವಾಗಿ ರುವುದನ್ನು ಮೆಂತೆ ಕಾಳು ಮತ್ತು ಬೆಲ್ಲದಿಂದ ತಯಾರು ಮಾಡಿದ್ದ ಲಡ್ಡು ತಿನ್ನುವುದರಿಂದ ಗರ್ಭಕೋಶ ಯಥಾಸ್ಥಿತಿಗೆ ತರಬಹುದು.