ಕರಾವಳಿ
ಮಹಿಳೆಯೊಬ್ಬರು ಮಲ್ಪೆ ಸಮುದ್ರದಲ್ಲಿ ಆತ್ಮಹತ್ಯೆಗೆ ಯತ್ನ !

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದಾಗ ಅವರನ್ನು ಮಲ್ಪೆ ಬೀಚ್ ನ ಲೈಫ್ ಗಾರ್ಡ್ಸ್ ರಕ್ಷಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಮುಂಬಯಿ ಮೂಲದ 45 ವರ್ಷದ ಮಹಿಳೆಯೊಬ್ಬರು 15 ವರ್ಷದ ಮಗನೊಂದಿಗೆ ಮಲ್ಪೆ ಬೀಚ್ ಗೆ ಆಗಮಿಸಿದ್ದರು.ಬೀಚ್ ನಲ್ಲಿ ಈಗ ಮಳೆಯ ಕಾರಣ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆ ತಂತಿ ಹಾಕಿದ್ದರು ಮಹಿಳೆಯು ಅದನ್ನು ಲೆಕ್ಕಿಸದೆ ಎರಡು ಭಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆಗ ಅಲ್ಲಿನ ಲೈಫ್ ಗಾರ್ಡ್ಸ್ ರಕ್ಷಿಸಿ ನಂತರ ಮಹಿಳೆ ಮತ್ತು ಮಗನನ್ನು ಮಲ್ಪೆ ಪೊಲೀಸರಿಗೆ ಒಪ್ಪಸಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.