ರಾಜ್ಯ
ಪುತ್ತೂರು: ನೆಹರೂ ನಗರದಲ್ಲಿ ಓಮ್ನಿ ಹಾಗೂ ಸ್ಕೂಟಿ ನಡುವೆ ಅಪಘಾತ

ಪುತ್ತೂರು: ನೆಹರೂ ನಗರದ ಮಸೀದಿಯ ಮುಂಭಾಗದಲ್ಲಿ ಓಮ್ನಿ ಹಾಗೂ ಸ್ಕೂಟಿ ಡಿಕ್ಕಿಯಾಗಿದ್ದು, ಸವಾರ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ನಡೆಯಿತು. ಮುರ ಕಡೆಯಿಂದ ಮಸೀದಿಯಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸಲು ಬರುತ್ತಿದ್ದ ಹರೀಶ್ ಮುರ ಎಂಬವರ ಓಮ್ನಿಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟಿ ಜಖಂಗೊಂಡಿದೆ.
ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪುತ್ತೂರು ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.