ಕರಾವಳಿ
ಕೋಟ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಕೋಟ: ಜೀವನದಲ್ಲಿ ಜಿಗುಪ್ಪೆಗೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ
ಗ್ರಾಮದಲ್ಲಿ ಜೂ.27ರಂದು ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಪಾರಂಪಳ್ಳಿ ನಿವಾಸಿ ಸಯ್ಯದ್ ಬ್ಯಾರಿ ಅವರ ಮಗಳು 19ವರ್ಷದ
ಮಿಸ್ತಿಯಾ ಎಂದು ಗುರುತಿಸಲಾಗಿದೆ, ಈಕೆ ಕುಂದಾಪುರ ಬ್ಯಾರೀಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದಳು, ಎಂದಿನಂತೆ ಜೂ. 27ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದು, ಸಂಜೆ 5ಗಂಟೆಗೆ ಮನೆಗೆ ಬಂದಿದ್ದಳು. ಬಳಿಕ ತಲೆನೋವು ಎಂದು ಕೋಣೆಗೆ ಹೋಗಿ ಮಲಗಿದ್ದಳು. ಸಂಜೆ 7 ಗಂಟೆಗೆ ತಂದೆ ಮತ್ತು ಅವರ ಕಿರಿಯ ಮಗಳು ಕೋಣೆಯ ಬಾಗಿಲು ತೆರೆದು ನೋಡಿದಾಗ ಮಿಸಿಯಾ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.