ಕರಾವಳಿ
ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ಇಬ್ಬರ ಬಂಧನ ; ಏಳು ಮಂದಿ ಪರಾರಿ..!

ಕುಂದಾಪುರ: ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಅಡ್ಡಕ್ಕೆ ದಾಳಿ ನಡೆಸಿದ ಕುಂದಾಪುರ ಪೊಲೀಸರು
ಇಬ್ಬರನ್ನು ಬಂಧಿಸಿ, 1080 ರೂ. ನಗದು ವಶಪಡಿಕೊಂಡ ಘಟನೆ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದಲ್ಲಿ ಜೂ.27ರಂದು ನಡೆದಿದೆ.
ಕೋಟೇಶ್ವರ ಗ್ರಾಮದ 29ವರ್ಷದ ಪ್ರಸಾದ್ ಪೂಜಾರಿ ಹಾಗೂ ತೆಕ್ಕಟ್ಟೆ ಗ್ರಾಮದ 36 ವರ್ಷದ
ಮಂಜುನಾಥ ಕಾಂಚನ್ ಬಂಧಿತ ಆರೋಪಿಗಳು.
ಕೊರವಾಡಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ
ಆಡುತ್ತಿರುವ ಬಗ್ಗೆ ಮಾಹಿತಿ ಆಧಾರಿಸಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 9 ಮಂದಿಯ ಪೈಕಿ 7
ಜನರು ಅಲ್ಲಿಂದ ಓಡಿ ಹೋಗಿದ್ದಾರೆ. ಓಡಿ ಹೋದ ಆರೋಪಿಗಳನ್ನು ಅರುಣ್, ಪ್ರವೀಣ್, ವಿಶ್ವನಾಥ,
ಶಶಿಧರ, ರೋಹಿತ್, ಭಾಸ್ಕರ ಮತ್ತು ಪಪ್ಪಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.