ರಾಜ್ಯ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕೆ ಎಸ್ ಆರ್ ಟಿ ಸಿ ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: 2021-22ನೇ ಸಾಲಿನ ಪದವಿ,
ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ, ಪಾಸ್ ಅವಧಿಯನ್ನು ವಿಸ್ತರಿಸಿ, ಕೆ ಎಸ್ ಆರ್ ಟಿ ಸಿ
ಆದೇಶಿಸಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2021-22ನೇ ಸಾಲಿನಲ್ಲಿ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವ್ಯಾಂಸಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ತರಗತಿಗಳು ಹಾಗೂ ಪರೀಕ್ಷೆಗಳು ನಡೆಯೋದ್ರಿಂದ, ವಿದ್ಯಾರ್ಥಿಗಳ ಬಸ್
ಪಾಸ್ ಅವಧಿಯನ್ನು ವಿಸ್ತರಿಸುವಂತೆ ಕೋರಲಾಗಿದೆ.

ಈ ಕೋರಿಕೆಯ ಹಿನ್ನಲೆಯಲ್ಲಿ ಎಲ್ಲಾ ವರ್ಗದ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆ, ತರಗತಿಗಳು ನಡೆಯುತ್ತಿದ್ದಲ್ಲಿ ಅದನ್ನು ಖಚಿತಪಡಿಸಿಕೊಂಡು, ಒಂದು, ಎರಡು ತಿಂಗಳ ಅವಧಿಗೆ ಅಂದರೇ ಜುಲೈ, ಆಗಸ್ಟ್ -2022ಕ್ಕೆ ನಿಗದಿತ ಮೊತ್ತವನ್ನು ಪಾವತಿಸಿಕೊಂಡು, ರಸೀದಿ ನೀಡುವುದು ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಹೀಗೆ ಪಡೆದ ರಸೀದಿ ಹಾಗೂ
ಹಳೆಯ ಪಾಸ್ ಎರಡನ್ನು ತೋರಿಸಿ, ಪ್ರಯಾಣಿಸಬಹುದು. ಈ ಬಗ್ಗೆ ಎಲ್ಲಾ ಚಾಲಕ,
ನಿರ್ವಾಹಕ, ತನಿಖಾ ಸಿಬ್ಬಂದಿಗಳುಕ್ರಮವಹಿಸುವಂತೆ ಸೂಚಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!