ಐಸಿಸ್ ಮಾನಸಿಕತೆಯ ಮತಾಂಧ ಶಕ್ತಿಗಳಿಗೆ ಸಂಘಟಿತ ಹಿಂದೂ ಸಮಾಜದಿಂದ ಮಾತ್ರ ತಕ್ಕ ಉತ್ತರ ಸಾಧ್ಯ: ಯಶ್ಪಾಲ್ ಸುವರ್ಣ ಆಕ್ರೋಶ

ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ಹಿಂದೂ ಕನಯ್ಯ ಲಾಲ್ ರವರ ಅಮಾನುಷ ಕಗ್ಗೋಲೆ ಮತಾಂಧ ಶಕ್ತಿಗಳ ವಿಕೃತ ಐಸಿಸ್ ಮಾನಸಿಕತೆಗೆ ಸಾಕ್ಷಿಯಾಗಿದ್ದು, ಘಟನೆಯ ಬಗ್ಗೆ ಜಾತ್ಯತೀತವಾದಿ, ಸ್ವಯಂ ಘೋಷಿತ ವಿಚಾರವಾದಿಗಳ ದಿವ್ಯ ಮೌನ ದೇಶದ ಆಂತರಿಕ
ಭದ್ರತೆಗೆ ಆತಂಕಕಾರಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂಪುರ್ ಶರ್ಮ ಹೇಳಿಕೆಯನ್ನು ಸಮರ್ಥಿಸಿದ ಎಂಬ ಏಕೈಕ ಕಾರಣಕ್ಕೆ ಅಮಾನುಷವಾಗಿ ಹತ್ಯೆ ಮಾಡಿ, ಘಟನೆಯ ವೀಡಿಯೋ ಮಾಡಿ ಪ್ರಧಾನಿ ನರೇಂದ್ರ ಮೋದಿ ಯವರನ್ನೂ ಹತ್ಯೆ ಬೆದರಿಕೆಯೊಡ್ಡಿರುವ ಪ್ರಕರಣವನ್ನು ಗಂಭೀರವಾಗಿ
ಪರಿಗಣಿಸಿ ರಾಷ್ಟ್ರೀಯ ತನಿಖಾದಳದ ಮೂಲಕ ತನಿಖೆ ನಡೆಯುತ್ತಿದ್ದು ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮದ ಭರವಸೆಯಿದೆ. ಸಂಘಟಿತ ಹಿಂದೂ ಸಮಾಜ ಮಾತ್ರ ಈ ಐಸಿಸ್ ಮಾನಸಿಕತೆಯ ಮತಾಂಧ ಶಕ್ತಿಗಳಿಗೆ ದಿಟ್ಟ ಉತ್ತರ ನೀಡಲು ಸಾಧ್ಯವಿದೆ, ಇಸ್ಲಾಮೀ ಭಯೋತ್ಪಾದನೆ ಮೂಲಕ
ಸಮಾಜದಲ್ಲಿ ಆಂತರಿಕ ಭದ್ರತೆಗೆ ಸವಾಲೊಡ್ಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮತೀಯವಾದಿಗಳ ವಿರುದ್ಧ ಬಹು ಸಂಖ್ಯಾತ ಸಮಾಜ ಸ್ವಯಂ ಜಾಗೃತರಾಗಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ. ಲವ್ ಜೆಹಾದ್, ಹಿಜಾಬ್ ಮುಂತಾದ ವಿವಾದಗಳನ್ನು ಸೃಷ್ಟಿಸಿ ದೇಶದಾದ್ಯಂತ ಸಮಾಜದಲ್ಲಿ ಶಾಂತಿ
ಸುವ್ಯವಸ್ಥೆ ಹದಗೆಡಿಸುವ ಷಡ್ಯಂತ್ರದಮುಂದುವರಿದ ಭಾಗವಾಗಿ ರಾಜಸ್ಥಾನದ ಅಮಾನುಷ ಘಟನೆ ನಡೆದಿದೆ.
ರಾಷ್ಟ್ರೀಯವಾದಿ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಬೆದರಿಕೆಯ ಮೂಲಕ ದೇಶಪ್ರೇಮಿ ಕಾರ್ಯಕರ್ತರ ನೈತಿಕ ಸೈರ್ಯ ಕುಗ್ಗಿಸಲುಯತ್ನಿಸುವ ಮತೀಯವಾದಿ ಶಕ್ತಿಗಳಿಗೆ ಜಾಗೃತ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಯಶ್ರಾಲ್ ಸುವರ್ಣ ತಿಳಿಸಿದ್ದಾರೆ.