ಕಾರವಾರ : ಪ್ರವಾಸಕ್ಕೆಂದು ಬಂದ 85 ವಿದ್ಯಾರ್ಥಿಗಳ ತಂಡ ; 4 ಜನ ಮೃತ್ಯು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಪ್ರವಾಸಕ್ಕೆಂದು ಕುಮಟಾ ತಾಲೂಕಿನ ಬಾಡದ ಸಿಲ್ವರ್ ಸೆಂಡ್ ರೆಸಾರ್ಟಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದ 85 ಜನ ಆಗಮಿಸಿದ್ದರು. ಅದರಲ್ಲಿ ಬೆಂಗಳೂರಿನಿಂದ ಬಂದ ಸಿಎಎ ವಿದ್ಯಾರ್ಥಿಗಳು ರೆಸಾರ್ಟ್ ಸಮೀಪ ಇರುವ ಸಮುದ್ರದಲ್ಲಿ ಬೆಳಗ್ಗೆ ನಾಲ್ಕು ಜನ ಕಸ ಬಿಸಾಡಲು ತೆರಳಿದ್ದರು,ಆ ಸಂದರ್ಭದಲ್ಲಿ ಸಮುದ್ರದ ಅಲೆ ಹೆಚ್ಚಾಗಿರುವುದರಿಂದ ಸಮುದ್ರ ದಾಳಿಗೆ ಸಿಲುಕಿ ನಾಲ್ಕು ಜನ ಮೃತಪಟ್ಟ ಘಟನೆ ನಡೆದಿದೆ.
ಸಮುದ್ರಕ್ಕೆ ತೆರಳಿದ ವಿದ್ಯಾರ್ಥಿಗಳು ತೇಜಸ್ ,ದಾಮೋದರ್ , ಬೆಂಗಳೂರು ಕಿರಣ್ ಕುಮಾರ್, ಮರಿ ರಾಜು ಬೆಂಗಳೂರು, ಅರ್ಜುನ್, ವಾಸುದೇವ್, ಚೈತ್ರ ಗೋಪಾಲ್ ಕುಮಾರ್ ಎಂದು ತಿಳಿಯಲಾಗಿದೆ,ಅದರಲ್ಲಿ ನಾಲ್ಕು ಮಂದಿ ಮತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವರೆಲ್ಲರೂ ವಿದ್ಯಾರ್ಥಿಗಳಾಗಿದ್ದು ಸುರೇಶ್ ಅಂಡ್ ಕೋ ಎಂಬಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ ಈ ಬಗ್ಗೆ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಸಿಪಿಐ ತಿಮ್ಮಪ್ಪನಾಯಕ ಪಿಎಸ್ಐ ನವೀನ ನಾಯಕ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಮೃತದೇಹದ ಹುಡುಕುತ್ತಿದ್ದಾರೆ.
ಈಗಾಗಲೇ ಅರ್ಜುನ್ ವಾಸುದೇವ್ ಚೈತ್ರ ಗೋಪಾಲ್ ಇವರ ಮೃತ ದೇಹ ಪತ್ತೆಯಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.