ರಾಜ್ಯ
ರೇಬಿಸ್ ಚುಚ್ಚುಮದ್ದು ವಿಫಲ: ನಾಯಿ ಕಡಿತಕ್ಕೊಳಗಾದ ವಿದ್ಯಾರ್ಥಿನಿ ಸಾವು

ಕೇರಳ:ನಾಯಿ ಕಚ್ಚಿ ವಿದ್ಯಾರ್ಥಿನಿ ಮೃತಪಟ್ಟ ದುರಂತ ಘಟನೆ ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ನಡೆದಿದೆ.
ಶ್ರೀಲಕ್ಷ್ಮಿ(19) ಮೃತ ವಿದ್ಯಾರ್ಥಿನಿ. ಮೇ 30 ರಂದು
ಶ್ರೀಲಕ್ಷ್ಮಿಗೆ ಬೀದಿ ನಾಯಿ ಕಚ್ಚಿದೆ. ಇದಾದ ನಂತರ ವೈದ್ಯರು ರೇಬೀಸ್ ಲಸಿಕೆ ತೆಗೆದುಕೊಳ್ಳುವಂತೆ ಹೇಳಿದ್ದಕ್ಕೆ ತೆಗೆದುಕೊಂಡಿದ್ದರು.
ಕೆಲವು ದಿನಗಳ ಹಿಂದೆ ವಿದ್ಯಾರ್ಥಿನಿಯಲ್ಲಿ ರೇಬೀಸ್
ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಜ್ವರ
ಕಾಣಿಸಿಕೊಂಡ ಪರಿಣಾಮ ತ್ರಿಶೂರ್ ಸರ್ಕಾರಿ
ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ನಿನ್ನೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೃತ ಪಟ್ಟಿದ್ದಾಳೆ.