ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್ ಸಂಸ್ಥೆಯಿಂದ ವಿವಿಧೆಡೆ ವೈದ್ಯರಿಗೆ ಗೌರವ ಸಮರ್ಪಣೆ

ಉಡುಪಿ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್ ಸಂಸ್ಥೆ
ವತಿಯಿಂದ , ಉಡುಪಿ, ಕುಂದಾಪುರ ಮತ್ತು ಮಂಗಳೂರು ಶಾಖೆಗಳಲ್ಲಿ. ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಉಡುಪಿಯಲ್ಲಿ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ಹಾಗೂ ಉಡುಪಿ ಟೆಂಪಲ್ ಸಿಟಿ ಲೀಜಿನ್ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಮುಖ್ಯಅತಿಥಿಗಳಾಗಿ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಭಾಗವಹಿಸಿದ್ದರು.
ವೈದ್ಯರುಗಳಾದ ಡಾ. ರವೀಂದ್ರನಾಥ್, ಡಾ. ಭಾಸ್ಕರ್
ಪಾಲನ್, ಡಾ. ಅಶೋಕ್ ಕುಮಾರ್, ಡಾ. ರಂಜಿತಾ
ನಾಯಕ್, ಡಾ. ಮ್ಯಾರೆಟ್ ಡಿ ಸೋಜಾ, ಡಾ. ದೀಪಾ
ನಾಯಕ್, ಡಾ. ಶ್ರೀಪತಿ ಎಂ. ಭಟ್, ಉದ್ಯಾವರ
ಹಾಗೂ ಆಯುರ್ವೇದ ಕಾಲೇಜಿನ ವೈದ್ಯರು ಹಾಗೂ
ಕುಂದಾಪುರದಲ್ಲಿ ಹಿರಿಯ ವೈದ್ಯರುಗಳಾದ ಕುಂದಾಪುರ ಡಾ. ಎ. ವಿ. ಶೆಟ್ಟಿ, ಡಾ. ಎಂ. ವಿ. ಕುಲಾಲ್ ಹಾಗೂ ಇನ್ನಿತರ ವೈದ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಟೆಂಪಲ್ ಸಿಟಿ ಲೀಜಿನ್ ನ ಅಧ್ಯಕ್ಷರಾದ ಜಗದೀಶ ಕೆಮ್ಮಣ್ಣು, ವಿಜಯ್ ಕುಮಾರ್ ಉದ್ಯಾವರ, ಸಂತೋಷ್ ಉದ್ಯಾವರ, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಗಿರಿಜಾ ಹೆಲ್ತ್ ಕೇರ್.ಸರ್ಜಿಕಲ್ಸ್ ನ ಮಾಲಕರಾದ ರವೀಂದ್ರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.