ಕರಾವಳಿ
ಉಡುಪಿ : ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್: ಉಡುಪಿ ಉಪ ಔಷಧೆ ನಿಯಂತ್ರಕರಿಗೆ ವರ್ಗಾವಣೆ- ಸನ್ಮಾನ

ಉಡುಪಿ : ಉಡುಪಿಯಲ್ಲಿ ಉಪ ಔಷಧ ನಿಯಂತ್ರಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನಾಗರಾಜ್ ಕೆ ವಿ ಅವರನ್ನು ನಗರದ ಪ್ರಸಿದ್ಧ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿಯಲ್ಲಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಅಲ್ಲದೆ ಕೊರೋನಾ ಸಮಯದಲ್ಲಿ ಅಗತ್ಯ
ಔಷಧವನ್ನು ಜಿಲ್ಲೆಗೆ ಒದಗಿಸುವಲ್ಲಿ ರಾತ್ರಿ ಹಗಲು ಶ್ರಮಿಸಿದ ಸೇವೆಯನ್ನು ಗುರಿತಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ನೂತನವಾಗಿ ಉಪ ಔಷಧ ನಿಯಂತ್ರಕರಾಗಿ ಆಗಮಿಸಿದ ಮಂಗಳೂರಿನಲ್ಲಿ
ಕಾರ್ಯನಿರ್ವಹಿಸುತಿದ್ದ ದಕ್ಷ ಅಧಿಕಾರಿ ಶಂಕರ್ ನಾಯ್ಕ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು. ಈ
ಸಂದರ್ಭದಲ್ಲಿ ಗಿರಿಜಾ ಗ್ರೂಪ್ ಆಫ್ ಕಾನ್ಸನ್ಸ್‌ನ ಸಿ.ಎಮ್.ಡಿ ರವೀಂದ್ರ ಶೆಟ್ಟಿ, ಮತ್ತು ಗಿರಿಜಾ ಹೆಲ್ತ್
ಕೇರ್ ಆಂಡ್ ಸರ್ಜಿಕಲ್ಸ್‌ನ ಪಾಲುದಾರ ಹರೀಶ್ ಕುಮಾರ್ ಔಷಧ ನಿಯಂತ್ರಣ ಕಚೇರಿಯ ಸಹಾಯಕ ಅಧಿಕಾರಿ ನಿರಂಜನ್ ಉಪಸ್ಥಿತರಿದ್ದರು.