ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು,ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ
ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ
ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ
ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ
ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್
ನಲ್ಲಿ ರಿಸಪ್ಟನ್‌ನಲ್ಲಿಯೇ ಚಾಕು ಇರಿದು ಹಂತಕರು
ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು 12.30 ರ ಸುಮಾರಿಗೆ ಹೊರಜಗತ್ತಿಗೆ ಮಾಹಿತಿ ಲಭ್ಯವಾಗತೊಡಗಿದೆ.
ಇಬ್ಬರು ವ್ಯಕ್ತಿಗಳು ಮೊದಲು ಅಲ್ಲಿಗೆ ಬಂದಿದ್ದು, ಆಶೀರ್ವಾದ ಪಡೆಯುವಂತೆ ಕಾಲು ಹಿಡಿದಿದ್ದರು. ಚಂದ್ರಶೇಖರ್ ಗುರೂಜಿ ಹೋಟೆಲ್ ರೂಮ್ ನಿಂದ ಬರುವುದನ್ನೇ ಕಾದು ಕುಳಿತಿದ್ದ ದುಷ್ಕರ್ಮಿಗಳಲ್ಲಿ ಓರ್ವ ಅವರ ಆಶೀರ್ವಾದ ಬೇಡುವ ನೆಪದಲ್ಲಿ ಕಾಲಿಗೆ ಬಿದ್ದಿದ್ದ ಅಷ್ಟರಲ್ಲಿ ಇನ್ನೊಬ್ಬ ಚಾಕು ಪ್ರಹಾರ ಶುರು ಮಾಡಿದ್ದ. ಗುರೂಜಿ ಆಶೀರ್ವಾದ ನೀಡುತ್ತಿರುವಂತೆ ಏಕಾಏಕಿ ಅವರ ಮೇಲೆ ಸುಮಾರು ಮುಕ್ಕಾಲು- ಒಂದು ಅಡಿ ಚಾಕುವಿನಿಂದ ಹಲ್ಲೆ
ನಡೆಸಿದ್ದಾರೆ .
ಹೋಟೆಲಿನ ಸಿಸಿ ಟಿವಿಯಲ್ಲಿ ಸಂಪೂರ್ಣ ಕೊಲೆ ದಾಖಲಾಗಿದೆ. ಹೋಟೆಲಿನಲ್ಲಿ ಇದ್ದ ಸ್ಟಾಫ್ ನೋಡನೋಡುತ್ತಿದ್ದಂತೆ ಕೊಲೆ ನಡೆದಿದೆ. ಯಾವುದೇ ಭಯ ಇಲ್ಲದೆ ಅಪರಾಧಿಗಳು ಕೊಲೆಯಲ್ಲಿ
ತಲ್ಲೀನ ದುರದೃಷ್ಟವಶಾತ್ ಯಾರೊಬ್ಬ ಕೂಡಾ ಕೊಲೆಯನ್ನು ತಡೆಯಲು ಧೈರ್ಯ ತೋರಿಲ್ಲ. ಕೊಲೆ ನಡೆದ ನಂತರ ಚಾಕು ಸಮೇತ ಆರೋಪಿಗಳು ಪರಾರಿ ಆಗಿದ್ದಾರೆ. ತೀವ್ರ ದ್ವೇಷ ಇರುವ
ಹಿನ್ನೆಲೆಯಲ್ಲಿ ಈ ಪ್ಲಾನ್ ಮರ್ಡರ್ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ.
ಸರಳ ವಾಸ್ತು ಸಲಹೆ ನೀಡುವ ಮೂಲಕ ಫೇಮಸ್
ಆಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನೂ
ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ
ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ
ಮನೆಮಾತಾಗಿದ್ದರು.