
ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ದ ಮೂಲಕ ಜನಪ್ರಿಯತೆ ಪಡೆದು, ನಂತರ ಸಿನಿಮಾದಲ್ಲುಖ್ಯಾತಿ ಗಳಿಸಿದ ನಟಿ ಮಯೂರಿ ಶುಕ್ರವಾರ ಜೂನ್ ೧೨ ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ. ವಿವಾಹದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು,ನಾನು ಮದುವೆ ಆಗಿದ್ದೇನೆ. ನಮ್ಮ 10 ವರ್ಷದ ಗೆಳೆತನಕ್ಕೆ ಇಂದು ಅರ್ಥ ಸಿಕ್ಕಿದೆ. ಸದ್ಯದಲ್ಲೇ ನಾವು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ. ಚಿತ್ರರಂಗದ ಅನೇಕರು ಶುಭ ಹಾರೈಸುತ್ತಿದ್ದಾರೆ.