ಕರಾವಳಿ

ಹೆಜಮಾಡಿ ವಿಠ್ಠಲ್ ಭಟ್ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ

ಉಡುಪಿ :  ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರು ಹಾಗೂ ಸಮಾಜ ಸೇವಕ ವೇದಮೂರ್ತಿ ವಿಠ್ಠಲ ಭಟ್ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿ, ಹೆಜಮಾಡಿ ಮಲ್ಯರ ಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚರಾಗಿ ಸೇವೆ ಸಲ್ಲಿಸಿರುವ ವೇದಮೂರ್ತಿ ವಿಠಲ್ ಭಟ್ ರವರು ಜು.1ರಂದು ನಿಧನರಾದರು.

ಅವಿವಾಹಿತರಾಗಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೆಜಮಾಡಿ ಗ್ರಾಮವೂ ಸೇರಿದಂತೆ ಕಾಪು ತಾಲೂಕಿನಲ್ಲಿ ಸಂಘದ ಶಾಖೆಗಳೂ ಸೇರಿದಂತೆ ಹಿಂದು ಸಂಘಟನೆಯ ಕೆಲಸ ಕಾರ್ಯಗಳಿಗೆ ಅಡಿಪಾಯ ಹಾಕುವಲ್ಲಿ ಅವರ ಪಾತ್ರ ಅನನ್ಯವಾದುದು. ಅಯೋಧ್ಯಾ‌ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಕರಸೇವೆಯಲ್ಲಿಯೂ‌ ಪಾಲ್ಗೊಂಡಿದ್ದರು. ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಠ್ಠಲ್ ಭಟ್ ರವರು ಡಾ! ವಿ.ಎಸ್. ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಉಡುಪಿ ಸೋಮಶೇಖರ ಭಟ್ ಮುಂತಾದವರ ಒಡನಾಡಿಯಾಗಿದ್ದರು.

ಪ್ರಕೃತಿ ಪ್ರೇಮಿಯಾಗಿದ್ದ ವಿಠ್ಠಲ್ ಭಟ್ ರವರು ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಮರಗಳನ್ನು ನೆಟ್ಟಿದ್ದರು. ಜೀವನಪೂರ್ತಿ ಹಿಂದು ಸಂಘಟನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವಿಠ್ಠಲ್ ಭಟ್ ರವರು ಅನೇಕರಿಗೆ ಪ್ರೇರಣಾಶಕ್ತಿಯಾಗಿದ್ದರು. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಬಂಧುಗಳು ಮತ್ತು‌ ಹಿತೈಷಿಗಳಿಗೆ ಅವರ ಅಗಲುವಿಕೆಯ ದುಖ:ವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!