ಕರಾವಳಿ
ಜೆ. ಇ. ಇ ‘ಮೈನ್ಸ್ ನಲ್ಲಿ (JEE Mains) ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

IIT, NIT, GFTI ಮೊದಲಾದ ಪ್ರತಿಷ್ಟಿತ ಕಾಲೇಜುಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಶ್ರೀಕಾಂತ ಹೆಗಡೆ 98.48 ಪರ್ಸಂಟೈಲ್, ರಾಘವೇಂದ್ರ ತಾಳಿಕೋಟೆ 97.28 ಪರ್ಸಂಟೈಲ್, ಆಶಿಕ್ ಪೂಜಾರಿ 92.60 ಪರ್ಸಂಟೈಲ್,ಹಾಗೂ ಹಾಸನ ಹೆಚ್ .ಕೆ .ಎಸ್. ಪಿ ಯು ಕಾಲೇಜಿನ ಕುಮಾರಿ ಅನ್ವಿನ್ ಬಿ ಪಿ 98.19 ಪರ್ಸಂಟೈಲ್ ಗಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನಡಿಯಲ್ಲಿ ತರಬೇತಿಯನ್ನು ಪಡೆದು ಪ್ರಥಮ ಪ್ರಯತ್ನದಲ್ಲೇ ಈ ಸಾಧನೆ ಗೈದಿದ್ದಾರೆ. ಜೆ. ಇ. ಇ.ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.