ರಾಜ್ಯ
ಪ್ರಸಿದ್ಧ ದೇವಸ್ಥಾನಕ್ಕೆ ವಂಚನೆ: ಆರೋಪಿಯ ಬಂಧನ

ಶಿರಸಿ: ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನಕ್ಕೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ದೇವಸ್ಥಾನಕ್ಕೆ ಮೆಟಲ್ ಡಿಕೆಕ್ಟರ್ ಮಾಡಿಕೊಡುವುದಾಗಿ ಹೇಳಿದ್ದ ಆರೋಪಿ, ಮುಂಗಡವಾಗಿ ಹಣವನ್ನೂ ಪಡೆದಿದ್ದ. ಅಂಕೋಲಾದ ಕುಸುಮಾ ಇನ್ಪೊಟೆಕ್ ಮಾಲೀಕ ಗಜಾನನ ವರ್ಣೇಕರ್ ಬಂಧಿತ ಆರೋಪಿ. ಮೆಟಲ್ ಡಿಟೆಕ್ಟರ್ ಅಳವಡಿಸುವುದಾಗಿ ಹೇಳಿಕೊಂಡು ಚೆಕ್ ಮೂಲಕ 1 ಲಕ್ಷದ 81 ಸಾವಿರ ಹಣವನ್ನು ಚೆಕ್ ಮೂಲಕ ಪಡೆದಿದ್ದ. ಈ ಸಂಬoಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.