ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ವಂದಿಸಿ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಪಧಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ಸಭೆ 2022
ಕುಂದಾಪುರ : ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ದಿನಾಂಕ 10-07-2022 ಭಾನುವಾರ ಕುಂದಾಪುರದ ವಿದ್ಯಾರಂಗ ಮಿತ್ರಮಂಡಳಿ ಇಲ್ಲಿ ಆಯೋಜಿಸಲಾಗಿತ್ತು.
ಸ್ವಾಗತ
# ಸ್ವಾಗತವನ್ನು ಸಂಸ್ಥೆಯ ಗೌರವ ಸದಸ್ಯರಾದ *ಸುನೀಲ್ ಖಾರ್ವಿ* ನಿರ್ವಹಿಸಿದರು.
ಪ್ರಾಸ್ತಾವಿಕ ಮಾತು
#ಪ್ರಾಸ್ತಾವಿಕ ಮಾತನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಜ್ಞಾನಾನಂದ ಐರೋಡಿ ಇವರು ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಸದಸ್ಯರಿಗೆ ಹೆಲ್ಪಿಂಗ್ ಹ್ಯಾಂಡ್ಸ್ ನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದರು.
ವರದಿ ವಾಚನ
# ಸಂಸ್ಥೆಯ ಎರಡು ವರ್ಷಗಳ ಅವಧಿಯ 13 ಸೇವಾ ಯೋಜನೆಯ ಬಗ್ಗೆ ಹೆಲ್ಪಿಂಗ್ ಹ್ಯಾಂಡ್ಸ್ ಗೌರವ ಸದಸ್ಯರಾದ *ಸಂದೀಪ್ ಮೊಗವೀರ* ವಾಚಿಸಿದರು.
ಎರಡು ವರ್ಷಗಳ ಅವಧಿಯ 13 ಯೋಜನೆಯ ವಾರ್ಷಿಕ ಲೆಕ್ಕಾಚಾರ
#ತದನಂತರ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಸಂಸ್ಥೆ ಹುಟ್ಟಿದಾಗಿನಿಂದ ಇಲ್ಲಿಯ ತನಕ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಸವಿವರವಾಗಿ ವಿವರಿಸಿದರು. ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರದ 13 ಯೋಜನೆಗಳ ಸಂಪೂರ್ಣ ಹಣಕಾಸಿನ ಲೆಕ್ಕಾಚಾರವನ್ನು ಸಭೆಗೆ ತಿಳಿಸಿ ಎಲ್ಲಾ ಸದಸ್ಯರಿಗೂ ಹಾಗೂ ಪಧಾಧಿಕಾರಿಗಳಿಗೆ ಲೆಕ್ಕಚಾರವನ್ನು ಪುನರ್ ಪರಿಶಿಲಿಸಲು ಲೆಕ್ಕಾಚಾರದ ಪುಸ್ತಕವನ್ನು ನೀಡಿದರು.
ನೂತನ ಪಧಾಧಿಕಾರಿಗಳ ಆಯ್ಕೆ
ಅಧ್ಯಕ್ಷರನ್ನಾಗಿ ಪ್ರದೀಪ್ ಮೊಗವೀರ ಅವರನ್ನು ಅವೀರೊಧವಾಗಿ ಮತ್ತೆ ಪುನರ್ ಆಯ್ಕೆ ಮಾಡಲಾಯಿತು.
ನೂತನ ಗೌರವಾಧ್ಯಕ್ಷ ರಾಗಿ ಅವಿರೋಧವಾಗಿ ರವೀಂದ್ರ ರಟ್ಟಾಡಿ ಇವರನ್ನು ಆರಿಸಲಾಯಿತು.
ನೂತನ ಗೌರವ ಸಲಹೆಗಾರರ ನ್ನಾಗಿ ರಾಘವೇಂದ್ರ ಕುಂದರ್ ಹೊದ್ರಾಳಿ ಹಾಗೂ ರಾಘವೇಂದ್ರ ಪೂಜಾರಿ ಕಟ್ ಬೆಲ್ತೂರು (ದುಬೈ) ಇವರನ್ನು ಆಯ್ಕೆ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಗಳಾಗಿ ಚೇತನ್ ಖಾರ್ವಿ ಕುಂದಾಪುರ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಕೋಷಾಧಿಕಾರಿ ಗಳಾಗಿ ಸುನೀಲ್ ತಲ್ಲೂರು ಇವರನ್ನು ಆಯ್ಕೆ ಮಾಡಲಾಯಿತು.
ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಪ್ರಮುಖ ಯೋಜನೆಯಾದ ಅನ್ನದ ಬಟ್ಟಲು ಯೋಜನೆ ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸುಕೇಶ್ ನಾಯ್ಕ್ ಕುಂದಾಪುರ ಹಾಗೂ ಈ ಯೋಜನೆಯ ಜೊತೆ ಕಾರ್ಯದರ್ಶಿಗಳನ್ನಾಗಿ ರಜತ್ ಖಾರ್ವಿ ಇವರನ್ನು ಆಯ್ಕೆಮಾಡಲಾಯಿತು.
ನೂತನ ಸಂಘಟನಾ ಕಾರ್ಯದರ್ಶಿಗಳನ್ನಾಗಿ ದೀಪಕ್ ಖಾರ್ವಿ ಕುಂದಾಪುರ ಸಂದೀಪ್ ಮೊಗವೀರ ಹೊದ್ರಾಳಿ ಹಾಗೂ ಹರೀಶ್ ಕೋಟಾನ್ ಕುಂದಾಪುರ ಇವರನ್ನು ಆಯ್ಕೆ ಮಾಡಲಾಯಿತು.
ಹೆಲ್ಪಿಂಗ್ ಹ್ಯಾಂಡ್ಸ್ ಪ್ರಚಾರ ಸಮಿತಿ ಕಾರ್ಯದರ್ಶಿಗಳಾಗಿ ಸತ್ಯನಾರಾಯಣ ಪೂಜಾರಿ ಇವರನ್ನು ಆಯ್ಕೆಮಾಡಲಾಯಿತು.
ಹೊಸದಾಗಿ ಆಯ್ಕೆಯಾದ ಎಲ್ಲಾ ಪಧಾಧಿಕಾರಿಗಳು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಅವರನ್ನು ಆದರ್ಶವಾಗಿಟ್ಟು ಕೊಂಡು ಪದಗ್ರಹಣ ಮಾಡಿದರು.
ಮುಂದಿನ ದಾರಿ
ಹೆಲ್ಪಿಂಗ್ ಹ್ಯಾಂಡ್ಸ್ ಮುಂದಿನ ದಿನಗಳಲ್ಲಿ ಮಾಡಬೇಕಾಗಿರುವ
ಸಮಾಜಪರ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಂಸ್ಥೆಯನ್ನು ರಿಜಿಸ್ಟರ್ ಮಾಡುವ ನಿಟ್ಟಿನಲ್ಲಿ ಹಾಗೂ ಸಂಸ್ಥೆಗೆ ಒಂದು ಆಫ಼ೀಸ್ ಮಾಡುವ ಬಗ್ಗೆ ಗೌರವಾಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಎಲ್ಲರಿಗೂ ಚಾ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು
ಧನ್ಯವಾದ ಸಮರ್ಪಣೆ
ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಖಾರ್ವಿ ಇವರು ಧನ್ಯವಾದ ಸಮರ್ಪಿಸಿದರು.
ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ
(ನೊಂದ ಹೃದಯಗಳಿಗೆ ನೆರವಿನ ಹಸ್ತ)