ರಾಜ್ಯ
ಶಿವಮೊಗ್ಗ : ರೌಡಿ ಶೀಟರ್ ನಾ ಬರ್ಬರ ಹತ್ಯೆ

ಶಿವಮೊಗ್ಗ : ನಗರದದ ಕುಖ್ಯಾತ ರೌಡಿಯೊಬ್ಬನನ್ನು ದುಷ್ಕರ್ಮಿಗಳು ಇಂದು ಬರ್ಬರ ಹತ್ಯೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.
ಕೊಲೆಯಾದ ರೌಡಿ ಶೀಟರ್ ಹಂದಿ ಅಣ್ಣಿ ಎಂದು ತಿಳಿದು ಬಂದಿದೆ.ವಿನೋಬನಗರದ ಚೌಕಿ ಬಳಿ ಹಂದಿ ಅಣ್ಣಿ ಕೊಲೆಯಾಗಿದೆ.
ಇನ್ನೋವ ಕಾರಿನಲ್ಲಿ ಬಂದ ನಾಲೈದು ಜನರ ಗುಂಪು ಬೈಕ್ ನಲ್ಲಿ ತೆರಳುತಿದ್ದ ಹಂದಿ ಅಣ್ಣಿ ಎಂಬ ರೌಡಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತಲೆಯ ಮೇಲೆ ಭೀಕರವಾಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಶಿವಮೊಗ್ಗದ ಗತಕಾಲದ ರೌಡಿ ಲವಕುಶ ಸಹೋದರರ ಮರ್ಡರ್ ಕೇಸ್ ನಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದನು. 8 ಮರ್ಡರ್ ಪ್ರಕರಣಗಳು ಈತನ ಮೇಲಿದ್ದವು ಎನ್ನಲಾಗಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.