ಅಂತಾರಾಷ್ಟ್ರೀಯ
ಸೆಲ್ಲೀ ತೆಗೆಯಲು ಹೋಗಿ ಸಮುದ್ರದಲ್ಲಿ ಕೊಚ್ಚಿ ಹೋದ ಎಂಟು ಜನ, ಹಲವರು ನಾಪತ್ತೆ
ಒಮಾನ್: ಸೆಲ್ಸಿ ತೆಗೆದುಕೊಳ್ಳುವ ವೇಳೆ ಎಂಟು ಜನರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ಈ ದುರಂತದ ವಿಡಿಯೋವೊಂದು ಸಾಮಾಜಿಕ
ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಮುಳುಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
ಈ ದುರಂತ ಒಮಾನ್ನ ಅಲ್ ಮುಸ್ಟೈಲ್ ಬೀಚ್ನಲ್ಲಿ ನಡೆದಿದೆ, ಕೆಲವರು ಸುರಕ್ಷತಾ ಬೇಲಿಯನ್ನು ನಿರ್ಲಕ್ಷಿಸಿ ಸಮುದ್ರ ದಂಡೆಯಲ್ಲಿ ಸೆಲ್ಸಿ ತೆಗೆಯುತ್ತಿದ್ದಾಗ ಭಾರೀ ಪ್ರಮಾಣದಲ್ಲಿ ಅಪ್ಪಳಿಸಿದ ಅಲೆಯಲ್ಲಿ ಕೊಚ್ಚಿಹೋಗಿದ್ದಾರೆ. ಸಮುದ್ರದ ಕಡೆಯಿಂದ ಬಲವಾದ ಅಲೆ ಎದ್ದರೂ ಗಮನಕ್ಕೆ
ಬಾರದೆ ಜನರು ಮೋಜಿನಲ್ಲಿ ಮುಳುಗಿದ್ದೇ ಈ ದುರಂತಕ್ಕೆ ಕಾರಣ ಎಂದು ವರದಿಗಳು ಹೇಳಿವೆ.