ಪ್ರಾಕೃತಿಕ ವಿಕೋಪ ಸಮಸ್ಯೆ ಕುರಿತು ಜಿಲ್ಲಾಡಳಿತದ ವಾಟ್ಸ್ ಆಪ್ ಸಂಖ್ಯೆಗೆ ಮಾಹಿತಿ ನೀಡಿ
ಉಡುಪಿ: ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ
ಉಂಟಾಗುವ ನೆರೆ ಪ್ರವಾಹ, ಮನೆ ಹಾನಿ, ಮೂಲಭೂತ ಸೌಕರ್ಯಗಳ ಹಾನಿ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಛಾಯಾಚಿತ್ರದೊಂದಿಗೆ ಜಿಲ್ಲಾಡಳಿತದ ಗಮನಕ್ಕೆ ತಂದು, ಆ ಮೂಲಕ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ
ತರುವುದರೊಂದಿಗೆ ಕ್ಷಿಪ್ರಗತಿಯಲ್ಲಿ ಸಮಸ್ಯೆಗಳಿಗೆ
ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸ್ ಅಪ್ ಸಂಖ್ಯೆಯನ್ನು 9880831516 ಆರಂಭಗೊಳಿಸಿದ್ದು, ಇದರ ಸದುಪಯೋಗವನ್ನು ಪಡೆಯುವುದರೊಂದಿಗೆ ಮಾನ್ಸೂನ್ ಸಂಧರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಕಾಲದಲ್ಲಿ
ಪರಿಹಾರ ಕಾರ್ಯಕೈಗೊಳ್ಳಲುಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಕೋರಿದೆ.
ಸಾರ್ವಜನಿಕರು ವಾಟ್ಸ್ಅಪ್ ಮೂಲಕ ಯಾವುದೇ
ಸಮಸ್ಯೆಗಳಿಗೆ ಸಂಬಂಧಿಸಿದ ವೀಡಿಯೋ,
ಛಾಯಾಚಿತ್ರಗಳನ್ನು ಕಳುಹಿಸುವ ಸಂಧರ್ಭದಲ್ಲಿ ಸೂಕ್ತ ಜಿ.ಪಿ.ಎಸ್ ನೊಂದಿಗಿನ ಛಾಯಾಚಿತ್ರ ವೀಡಿಯೋ, ಘಟನೆ ನಡೆದ ಸ್ಥಳದ ಖಚಿತ ಮಾಹಿತಿ, ದಿನಾಂಕ ಹಾಗೂ ಸಮಯದೊಂದಿಗೆ ಘಟಿಸಿರುವ ಸಮಸ್ಯೆಗಳ ಬಗ್ಗೆ ಚುಟುಕಾದ ವಿವರ ಹಾಗೂ ಯಾವ ಇಲಾಖೆಗಳಿಂದ, ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂಬ ಮಾಹಿತಿಯನ್ನು
ನಮೂದಿಸಿದ್ದಲ್ಲಿ ತಿಳಿಸಿರುವ ಸಮಸ್ಯೆಗಳ ಕುರಿತು,
ವಿಳಂಬರಹಿತವಾಗಿ ಜರೂರಾದ ಕ್ರಮವಹಿಸಲು
ಸಾಧ್ಯವಾಗುತ್ತದೆ.
ಪ್ರಸ್ತುತ ಮಳೆಗಾಲದ ಸಂಧರ್ಭದಲ್ಲಿ ಸಂಭವಿಸಬಹುದಾದ ಅವಘಡಗಳು, ಸಾರ್ವಜನಿಕರು ಎದುರಿಸುವ ತೊಂದರೆಗಳು, ಇತರ ಅನಾನುಕೂಲಗಳ ಕುರಿತು ಹಾಗೂ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ
ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ
ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು, ಮಾಹಿತಿಯನ್ನು ಪಡೆಯಲು ಅಥವಾ ಇನ್ನಾವುದೇ ರೀತಿಯಲ್ಲಿ ತುರ್ತು ಸಂಧರ್ಭದಲ್ಲಿ ಜಿಲ್ಲಾಡಳಿತದ ನೆರವನ್ನು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಟೋಲ್ ಫ್ರೀ
ಸಂಖ್ಯೆ (24*7) ಕಂಟ್ರೋಲ್ ರೂಂ – 1077 ಹಾಗೂ
ದೂರವಾಣಿ ಸಂಖ್ಯೆ : 0820-2574802 ಪ್ರಸ್ತುತ
ಸಾರ್ವಜನಿಕರ ಸೇವೆಗೆ ಚಾಲ್ತಿಯಲ್ಲಿರುತ್ತದೆ ಎಂದು
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.