ಕರಾವಳಿ

ಮಂಗಳೂರು: ರಸ್ತೆ ದಾಟುವ ವೇಳೆ ಬೈಕ್ ಅಪಘಾತದಲ್ಲಿ ಇಬ್ಬರು ಮಕ್ಕಳು ಪಾರು; ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಮಂಗಳೂರು: ರಸ್ತೆ ದಾಟುವ ವೇಳೆಯಲ್ಲಿ ಬಾಲಕರಿಬ್ಬರಿಗೆ ವೇಗವಾಗಿ ಬಂದ ಬೈಕೊಂದು ಢಿಕ್ಕಿಯಾದ ಘಟನೆ ನಗರದ ಪಂಜಿಮೊಗರು ಬಳಿ ಭಾನುವಾರ ನಡೆದಿದೆ.

ಬೈಕ್ ಢಿಕ್ಕಿಯಾದ ರಭಸಕ್ಕೆ ಇಬ್ಬರು ಬಾಲಕರು ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಬಾಲಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತ ನಡೆದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!